ನೆಲದ ಮೇಲೆ ಬಾಳುತಿಹನು ಹಾರಲೊಲ್ಲ | ನರನು
ಹಾರುವಾಸೆ ಬಿಟ್ಟು ಅವನು ಬಾಳಲಿಲ್ಲ || ೧ ||

ಮೇಲೆ ಮೇಲೆ ಹಾರಲೆಂದು ಏಣಿ ಹಾಕಿ | ಅಲ್ಲಿ
ಕಾಲಹಾದಿ ಇಲ್ಲವೆಂದು ಎಣಿಕೆ ಹಾಕಿ || ೨ ||

ಮಂಜುಗಡ್ಡೆ ಮುಚ್ಚಿಬಿಟ್ಟು ಕಾಣದಂತೆ | ಶಿಖರ
ತಲೆಯನತ್ತ ಮುಗಿಲಿನಲಿ ಸೇರಿದಂತೆ || ೩ ||

ಅದರ ಮಂಜು ನಂಜುಗಟ್ಟಿ ಕಾಲ ಸೋಕೆ | ಅದನು
ತಡಕಿ ಹತ್ತಿ ಅಂತ್ಯವನ್ನು ಕಾಂಬ ಬಯಕೆ || ೪ ||

ಹಿಮಾಲಯದ ಗೌರಿಹರನ ಕಾಣಲೆಂದು | ಮನುಜ
ಗಂಗಮಾಯಿ ದಾರಿ ಹಿಡಿದು ನಡೆವ ಮಿಂದು || ೫ ||
*****