ಎಂತಹ ಒಳ್ಳೆ ಅವಕಾಶ ಸಿಕ್ಕಿತ್ತು.
ಆದರೂ ನಾನು ಆರರ ಮೇಲೆ ಏರಲಿಲ್ಲ
ಮನುಷ್ಯರೆಂದರೇ ವಾಕರಿಕೆ
ಅದೇ ಮುಗುಳ್ನಗೆ ಅದೇ ನಮಸ್ಕಾರ
ಅದೇ ಪ್ರಶ್ನೆ ಹೇಗಿದ್ದೀರ? ಅದೇ
ಉತ್ತರ ಚೆನ್ನಾಗಿದ್ದೇನೆ. ಕೇಳೀ ಕೇಳೀ
ಹಳಸಿ ಹೋಗಿರುವ ಪದಗಳು
ದುರ್ವಾಸನೆ ಬೀರುತ್ತಿವೆ. ಒಗೆಯ
ಬಾರದೇ ಅವನ್ನು ಮೂಡಲಿ
ಹೊಸ ಹೊಸ ಆವಿಷ್ಕಾರ
*****


















