ನಲ್ಮೆಯ ಗೆಳತಿ,
ನಾನು ಈ ದೇಶ ಬಿಟ್ಟು
ಬಹು ದೂರ ಹೊರಟಿರುವೆ.
ಮತ್ತೆ ನನ್ನ-ನಿನ್ನ ಭೇಟಿ
ಆಗದೆ ಹೋಗಬಹುದು.
ನಮ್ಮ ಸ್ನೇಹ ಅಮರ
ನಿರ್ಮಲ ಪ್ರೇಮ ನಿರಂತರ
ಒಡನಾಟದ ಸವಿ ನೆನಪು
ಚಿರ ನೂತನ.
ನಿನ್ನಿಂದ ನಾನೀಗ ಬಯಸುವುದು
ನೂರು ರೂಪಾಯಿ ನಗದು!
ನೀನು ಅದಕ್ಕೆ ತಯಾರಿಲ್ಲದಿದ್ದರೆ
ಹತ್ತಾದರೂ ಕೊಡು, ಒಂದಾದರೂ ಕೊಡು
ಕೊನೆಗೆ ಒಂದು ಪೈಸಾನಾದರೂ
ನೀ ಕೊಡಲೇ ಬೇಕು.
ಬರಿಗೈಯಲ್ಲಿ ಮಾತ್ರ ಕಳಿಸಬೇಡ.
ಇರಬಹುದು ನನ್ನ ಬಳಿ ಲಕ್ಷ ರೂಪಾಯಿ
ನನಗರಿವಿದೆ, ನಿನ್ನ ನೂರು ರೂಪಾಯಿ
ನಿನ್ನವರಿಗೆ ಮೀಸಲೆಂದು.
ನನ್ನದರಲ್ಲಿ ನಿನಗೆಷ್ಟು ಬೇಕಾದರೂ
ಕೊಡಲು ನಾ ಸದಾ ಸಿದ್ಧ.
ಆದರೂ… ನೀ ನನಗಾಗಿ
ಒಂದು ಪೈಸಾ ಕೊಡಲಾರೆಯಾ?
ನೀ ಕೊಟ್ಟರೂ, ಬಿಟ್ಟರೂ, ನಾ ಹೊರಟೆ
ಅನಂತರ, ಕೊನೆಯವರೆಗೂ
ಕೊರಗುವುದು ಬೇಡ, ಗೆಳತಿ…
ಯೋಚಿಸು… ನಿರ್ಧರಿಸು.
*****
೨೬-೧೦-೧೯೯೦