
ಗಗನ ನಿನ್ನದು ಭೂಮಿ ನಿನ್ನದು ಶಿವನೆ ಸಕಲವು ನಿನ್ನದು ಕಡಲು ನಿನ್ನದು ಕಾಡು ನಿನ್ನದು ನಿನ್ನದೆಲ್ಲವು ನನ್ನದು ನೀನು ನೀಡಿದ ಶ್ರೇಷ್ಠ ಉಡುಗರೆ ಯಾರು ನೀಡಲು ಬಲ್ಲರು ನೀನು ಮಾಡಿದ ಶ್ರೇಷ್ಠ ಪ್ರೀತಿಯ ಯಾರು ಮಾಡಲು ಬಲ್ಲರು. ಜನುಮ ಜನುಮದ ಗೆಳೆಯ ನೀ...
ಹಾರು ಹಾರೆಲೆ ಚೆಲುವಕ್ಕಿ ಹಾರು, ಬದುಕಿನ ದಿನಗಳ….. ಮರೆತು ಮುಗಿದಿತು ಕಾಲವು ಚೆಲುವಿನ ಕ್ಷಣಗಳ ಮಾಗಿಹ ಮಾವಿನ ಕೊಂಬೆಗಳ, ಊರಿಂದೂರಿಗೆ ಅಲೆಯುವ ಬವಣೆಯ ಅರಿಯಲು ಜೀವನ ಸೆಳಕುಗಳ ಹೆರವರ ಊರಿದು ತಿಳಿಯೆಲೆ ಹಕ್ಕಿಯೆ! ಎರವಿನ ಬಾಳಿದು ತಾಸುಗಳ...
ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು ದೀಪಗಳ ಮಿಲನ ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ ...
ಅಂಬನೀ ದಯಮಾಡೆ ಅಂಬುಜ ಲೋಚನೆ ತುಂಬಿದೆ ನಿನ್ನಾ ಬಿಂಬವು ಸುತ್ತಲು ಇಂಬುದೋರಮ್ಮ ನನ್ನೊಳಗು || ಪ || ಚಿಕ್ಕಿಯ ಹೂಗಳ ಶಿರದಿ ಮುಡಿದವಳೆ ಚೊಕ್ಕಚಂದ್ರನ ತಿಲಕ ಹಣೆಯಲ್ಲಿ ಅಕ್ಷಯ ಪ್ರಭೆಯನು ಹರಿಸುವೆ ತಾಯೆ ಪುಷ್ಕಳ ತೇಜದ ಸೂರ್ಯನ ಕಣ್ಣಲಿ || ೧ || ಕ...
ನನ್ನನ್ನು ಆರೈಸಿದ ಈ ಊರು, ಹೊಲಮಾರು ಆನಂದ ನೀಡಿದ ಗುಡಿ, ಗಿಡ, ಮರ ಎತ್ತಿ ಆಡಿಸಿದ ಮೂರ್ತಿಯಾಗಿ ರೂಪಿಸಿದ ಜೀವಿಯಾಗಿ ಛಾಪಿಸಿದ ಜನ ಜೊತೆ ಜೊತೆ ಬೆಳೆದ ಗೆಳೆಯ, ಗೆಳತಿಯರು ಅವರ ಸಂಗಡ ಕಳೆದ ಮಧುರ ಕ್ಷಣಗಳು ಉಂಡ, ಕಂಡ, ಸಿಹಿ-ಕಹಿ ಘಟನೆಗಳು ನಾನು ಮ...
ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು ಇರುವುದು ಬಲು ಮೃದು ಹೆಣ್ಣ ತನು ಮನ...













