
ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತ...
ಘಮಟುಗಟ್ಟಿದ ಅಡುಗೆ ಕೋಣೆಗಳಿವೆ ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ! ಸೂರ್ಯ ಕಿರಣಗಳೇ ಕಾಣದ ನಮ್ಮ ಕತ್ತಲು ಕೋಣೆ ಗವಿಗೊಮ್ಮೆ ನೀನು ದಯಮಾಡಿಸಬಾರದೇ? ಪೇಟೆಗೆ ಹೋದ ಮಗ ಎನ್ಕೌಂಟರ್ನಲ್ಲಿ ನಲುಗಿದ ಯುದ್ಧಕ್ಕೆ...
ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನಡ...
ಓ ಯೋಗಿ ಶಿವಯೋಗಿ ವಿಶ್ವಶ೦ಕರ ಯೋಗಿ ಶಿವಶಿವಾ ಶಿವಯೋಗಿ ನೀ ಇಳೆಗೆಬಾ ರಂಭಾಪುರಿ ಪೀಠ ಮನುಜ ಪೀಠದ ಪಾಠ ಮನೆಮನೆಗೆ ಹೊಸಬೆಳಗು ನೀ ಹೊತ್ತು ಬಾ ಪಂಚಪೀಠದ ಸಿದ್ಧಿ ಪಂಚತತ್ವದ ಶುದ್ಧಿ ಸಹ್ಯಾದ್ರಿ ವಿಂದ್ಯಾದ್ರಿ ಹೈಮಾದ್ರಿ ಓಂ ಹಕ್ಕಿ ಹಾಡಿವೆ ಇಲ್ಲಿ ಕ...
ಮನೆಯ ತೊರೆದು ಹೊರಗೆ ಬಾರೆ ಹುಣ್ಣಿಮೆಯನು ನೋಡಲು ಇರುಳಿನೆದೆಯು ಹೂತು ಹರಿದ ಹಾಲಿನಲ್ಲಿ ಮೀಯಲು. ಹುಣ್ಣಿಮೆಯಿದು ಬಾನ ಬಾಳ ಪೂರ್ಣಿಮೆಯೇ ಅಲ್ಲವೇ? ಬುವಿಯ ಬಯಕೆ ಬಾಯಾರಿಕೆ ಕಳೆವ ಗಂಗೆಯಲ್ಲವೆ? ನಂದನಕ್ಕೆ ನೀರೆರೆಯುವ ಸಂಜೀವಕ ವಾಹಿನಿ! ದಿಕ್ತಟಗಳ ...
ಎದ್ದರು ನಗುವೆ ನೀ ಬಿದ್ದರು ನಗುವೆ ನೀ ಹೇಗಿದ್ದರು ನಗುವೆ ನೀನು ಇದ್ದರು ನಗುವೆ ನೀ ಇರದಿದ್ದರು ನಗುವೆ ನೀ ಓ ಚಿನ್ನದ ಹೂವೆ ನಗುವೆ ನೀನು ಎಚ್ಚರವಿದ್ದರು ನಿದ್ದೆಯಲಿದ್ದರು ಹೇಗಿದ್ದರು ನಗುವೆ ನೀನು ಮಾತಾಡುತಿದ್ದರು ಮೌನವಾಗಿದ್ದರು ಓ ಚಿನ್ನದ ಹ...
ಡಿಂಭದೊಳು ಕಾಂಬುದೆಂದಸಮಗ್ರವಲ್ಲವಿದು ಕುಂಭದೊಳಗಡಗಿದ್ದರೂ ಅಲ್ಪವಲ್ಲ ತೀರ್ಥ ಪ್ರಸಾದಗಳ ಜೀವಾನುಕರಣದೊಳು ಅದರಮರಭಾವಕ್ಕೆ ಮಾಲಿನ್ಯವಿಲ್ಲ; ಕರಣಗಮಸೌಲಭ್ಯವೀ ಮಹಾಭಾವಕೆನೆ ಎಲ್ಲ ಜೀವಕು ಇದುವೆ ತವರಾದುದೆನ್ನೆ ವಿವಿಧಾಕೃತಿಯ ಮೆರೆವ ವಿವಿಧವಿಧಿಗಳೊಳ...
ಮೌನ! ದೂರ ಬೆಟ್ಟಸಾಲು ಕಣಿವೆ, ಶಾಂತ ಸರೋವರದ ತನಕ ಅಂಕು ಡೊಂಕು ಕವಲು ಹಾದಿ ಉದ್ದಕ್ಕೂ ಹುಲ್ಲು ಹಾಸಿನ ಮೇಲೆ ಧ್ಯಾನಾಸಕ್ತ ಮೌನ ಮಲಗಿತು ಸದ್ದು ಗದ್ದಲವಿಲ್ಲ ಮೌನದಾವರಣ ಹೊದ್ದು! ಜುಳುಜುಳು ಹರಿವ ನದಿ ಗಾಳಿಯ ಸರಪರ ಶಬ್ದ ಹಕ್ಕಿಗಳ ಚಿಲಿಪಿಲಿ ಗಾನ...













