ಪಕ್ಕದ ಮನೆ ಹುಡುಗ ರಂಗನಾಥ
ಅವನು ಇನ್ನೂ ಅವಿವಾಹಿತ
ವಯಸ್ಸು ಆಗಿದೆ ಮೂವತ್ತಾರು
ಇವನೊಪ್ಪದ ಹುಡುಗಿಯರು ನೂರಾರು
ಇವನನ್ನೊಪ್ಪಿದ ಹುಡುಗಿಯರು ಕೆಲವು
ಅವರನ್ನು ತಿರಸ್ಕರಿಸಲು ಕಾರಣ ಹಲವು
ಕೆಲವರದು ಮೂಗು ಸೊಟ್ಟ; ಹಲ್ಲುಬ್ಬು
ಇನ್ನೂ ಕೆಲವು ಹುಡುಗಿಯರ ಕಣ್ಣು ಮಬ್ಬು
ಮದುವೆ ಅಗಿಲ್ಲ ಎಂದು ರಂಗನಾಥನಿಗೆ ಚಿಂತೆ
ಕೇಳುವವರ್ಯಾರಿಲ್ಲ ಅವನ ವ್ಯಥೆ
ಯಾವುದಾದ್ರೂ ಹುಡುಗಿ ಇದ್ರೆ ತಿಳಿಸಿ
ಫೋಟೋ-ವಿವರವನ್ನೂ ಜೊತೆಗೆ ಕಳಿಸಿ.
*****


















