ನಂಬಬೇಡ ಮನುಜ ಮನಸಿಗೆ
ಮನವು ನಿನ್ನಯ ಸವಾರಿ
ಲಗಾಮು ನಿನ್ನ ಕೈಯಲ್ಲಿರಲಿ
ಇಲ್ಲದಿದರೆ ಆಗುವುದು ಬಲುಭಾರಿ
ನಿನ್ನಂತೆ ಮನವು ನಟಿಸುವುದು
ಮತ್ತೆ ನಿನ್ನ ವಶೀಕರಿಸುವುದು
ಅದು ಹೇಳಿದಂತೆ ಕುಣಿಯುವಿ ಮತ್ತೆ
ನಿನ್ನ ಒಡೆತನ ಅದು ಅಪಹರಿಸುವುದು
ಯುಗಯುಗಕ್ಕೆ ಬೆಂಬಿಡದೆ ಮನ
ನಿನ್ನೊಂದಿಗೆ ಸಾಗಿ ಬರುತಿಹದು
ಪ್ರತಿ ಜನ್ಮದಲ್ಲೂ ಅದು ಗೆದ್ದು
ನಿನ್ನ ನರಕಕ್ಕೆ ಅಟ್ಟುತಿಹದು
ಕ್ಷಣವೂ ಪರಮಾತ್ಮಗೆ ಧ್ಯಾನಿಸದಂತೆ
ಮನವು ಭಾವಗಳ ಬಿತ್ತರಿಸುವುದು
ಪ್ರತಿ ಭಾವದಲ್ಲೂ ಮಾಯೆ ಮೋಹ
ಅದುವೆ ನಿಜವೆಂದು ಉತ್ತರಿಸುವುದು
ನಾಳೆ ಇದೆಯೋ ಬಾಳು ಬಲ್ಲವರ್ಯಾರು
ಮೋಸಹೋಗದಿರು ನೀನು ಮನಕ್ಕೆ
ಆ ಮೇಲೆ ನಿನ್ನ ತನು ಕರಗಿದಾಗ
ಮಾಣಿಕ್ಯ ವಿಠಲನಾಗದೇ ಭವಕ್ಕೆ
*****
















