Home / ಕವನ / ಕವಿತೆ

ಕವಿತೆ

ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ? ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್‍ಮಗಳು ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ? ತಾಯಿ ತಿನ್ನುವ ನೋವು ನನ್ನ ನೋವಾಗಿದೆ ಜೀವ ಅರಳುತ್ತಿರಲು ಬಿಸಿಲ ಧಗೆ ಬಿದ್ದಿದ...

ಅಮ್ಮ ಹೇಳುತ್ತಿದ್ದಳು ನನಗೆ ಸುಂದರ ಅಪ್ಸರೆಯ ಕಥೆಗಳನ್ನೇ ನನ್ನ ಅಂಗಳದ ಮಾವಿನಗಿಡವೇ ನನಗೆ ಜಗತ್ತಿನ ಸುಂದರ ವಸ್ತುವಾಗಿತ್ತು ಮರಕೋತಿ ಆಟಕ್ಕೆ ಮೈದಾನವಾಗಿತ್ತು ನಿರಂತರ ನನ್ನ ಭಾರ ಸಹಿಸುತ್ತಿತ್ತು. ಟೊಂಗೆ ಟೊಂಗೆಯಲಿ ತುಂಬಿದ ಗೆಳೆಯ-ಗೆಳತಿಯರ ಕಿ...

ನಿಂತಲ್ಲಿ ನಿಲ್ಲದೆ ಮನಸು ಧಾವಂತ ಮಾಡುತ ಇತ್ತು ಶಾಂತಿಯನರಸಿ ಗುಳೆ ಹೊರಟಿತ್ತು ಅಂತರಾತ್ಮನ ಮನೆ ಎಬ್ಬಿಸಿತ್ತು ಸೂರ್‍ಯಗೆ ಮೋರೆ ತೋರದೆ ಇತ್ತು ಸೂರ್‍ಯಕಾಂತಿಯ ನೋಡದೆ ಇತ್ತು ಹಾಡುವ ಹೆಣ್ಣಿನ ಕೇಳದೆ ಇತ್ತು ಆಡುವ ಮಕ್ಕಳ ಸೇರದೆ ಇತ್ತು ಹರಿವ ನದಿ...

ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್‍ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು ಅವನ ಜನನ ತೂತು ಕತ್ತಲಲ್ಲಿ ಅಂದು ಬಿಲ್ಲ...

ಇದು ಎಲ್ಲರಿಗೂ ಸಾಧ್ಯ ವಿಲ್ಲ ಬಿಡಿ, ಹೀಗೆ ಸುಮ್ಮನೆ ನೋಡಿ ನೋಡಿ ಹೋಗುವುದು ಆದರೂ ಮೋಡಿ ಹಾಕುವುದು ಏನೂ ಸಿಗುವುದಿಲ್ಲವೆಂದು ತಿಳಿದೂ ಇಂಥವರಿಗೆ ಅಂಜಿ ಬಾಳುವು ದಿದೆಯಲ್ಲಾ ಅದರಲ್ಲೊಂಥರಾ ರೋಮಾಂಚನ, ಒಂಥರಾ ಧಿಗಿಲು ಆದರೂ ಬಾಳಲ್ಲಿ ಇಂಥವರ ಸ್ಥಾನ ...

ತಂಗಿ… ಷೇರುಪೇಟೆ ಕುಸಿಯುತಿದೆ ಮಾರುಕಟ್ಟೆ ನಡುಗುತಿದೆ… ಕರಡಿಯೊಂದು ಕುಣಿಯುತ್ತಿದೆ ಗೂಳಿಯೊಂದು ತಿವಿಯುತ್ತಿದೆ ಗುಳ್ಳೆಯೊಂದು ಒಡೆಯುತಿದೆ ಕೊಳ್ಳೆಯೊಂದು ಕರಗುತ್ತಿದೆ… ಅಕ್ಕ… ಷೇರುಪೇಟೆಯೇ? ಗೊತ್ತಿಲ್ಲ ಕಣೆ! ಇಲ್ಲ...

ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ ಮೋಹಕ ನಗೆಯ ಹಾಲು ಹೊಳೆ...

ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ...

ಮೋಡದೊಳಗೆ ದೇವದೇವಯಾನಿಯರ ಮೆಲ್ಲನುಸಿರೋ ಝಲ್ಲೆನ್ನುವ ಮಾತೋ ಸುತ್ತಾಟ ಜಗ್ಗಾಟ ಕೊಸರಾಟ ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ ಇದು ಮದೋನ್ಮತ್ತ ದೇವಸ್ಪರ್ಷ. ಸಳಸಳನೆ ಮಳೆಬೀಜ ಸುರಿಸಿ ಬೆವರೊಡೆಯುವ ಘಳಿಗೆ ನಾಭಿಯುಸಿರು ನಾಸಿಕದೆಡೆಗೆ ಸೆಳೆತ ಜೀವಕುಡ...

ಹಸನು ಗೂಡನು, ಮಯಣಬೀಡನು ಎಸೆವ ಹುಳುಗಳ ನೋಡೆಲೊ. ಬಿಸಿಲು ಕಾಲದೆ, ಗೇದು ಸೋಲದೆ, ಒಸೆಯುತಿವೆ ಎಚ್ಚರದಲಿ. ಹುಳಕೆ ದೇವನು ಬುದ್ಧಿ ಈವನು ಕೆಲಸ ಹುಳು ಸರಿಗೈವುದು; ಚೆಲುವ ಗೂಡನು ನರನು ಮಾಡನು ಹುಳುವು ಕಟ್ಟಿದ ಹಾಗೆಯೇ. ಒಳಗೆ ಸುಳಿವುದು, ಹೊರಗೆ ನಲ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...