ಜೀವನ, ಸರಸವಿರಸದಲಿ ತಲೆಯೆತ್ತಿ ತೂರುವೆನು, ನನ್ನಾತ್ಮವನು ತೃಪ್ತಿಸುವ ವಾಣಿಯನು ಸ್ತುತಿಸುವೆನು; ಜಗಜಾಳಿನಾವರಣದಲಿ, ಸುಗಂಧಿಸುವ ಮಾರುತನ; ಮರೆಹೊಕ್ಕು, ಜೀವನಜಾಡನ್ನು ಜಾರಿ; ಮನದ ದುಗುಡವ ಕಳೆಯುವೆನು-ನಾನು. ಶಕ್ತಿಮಯ ಪ್ರಬಲದಲಿ ನಿಧಿನಿಕ್ಷೇಪ,...

ಪ್ಯಾನ್ಸಿಯೊಂದು ಸಣ್ಣ ಹೂವು, ಅದಕೆ ಹಳದಿ ನೀಲಿ ಬಣ್ಣ, ಕಣ್ಣಿಗೆಂಥ ಹಬ್ಬವಾಗಿ ಮೆರೆಯುತಿಹುದು ನೋಡು! ಅಣ್ಣ! ಎಂಥ ಆನಂದವು ದೇವನಿತ್ತ ಚೆಂದವು. ಒ೦ದು ಹೂವಿನಲ್ಲಿ ಚೆಲುವ- ನಿಂತು ತುಂಬಿದಂಥನಂತ ನಂದನದಲ್ಲೆಂಥ ಸೊಬಗ- ನಿರಿಸಿದನದರಾದಿಯಂತ ಹೊಳೆಯಬಹ...

ತೂಗ ತೂಗನ್ನಿರೆ | ತೂಗಿರಿ ಮನವ ವಿಚಾಣದಲೆ ||ಪ|| ಚಂದುಗುತ್ತೀ ಅರಸ | ಅವ ತನ್ನ ಮಗಳ ಮ್ಯಾಗಿನ ಮನಸ ದೇವ ದರುಮದ ಮಾತ | ಹಿರಿಯರೆ ಕೂತು ಕೆಳರಿ ನೀವು ||ತೂ||ಅ. ವ.|| ತೊಟ್ಟ ಕುಬುಸವ ಕಳೆದು | ಹಾಕ್ಯಾಳ ಬಾಲಿ ಬಾಗಿಲದೆದರು ತಂದಿ ಕಚೇರಿಲಿ ಬಂದ |...

೧ ಈ ಬದುಕಿಗೊಂದು ಬೆಲೆಯಿಹುದು ಮಗು ಹಿಡಿ ಮಣ್ಣು ತಿಂದು ನಾ ಬದುಕಬೇಕು; ಹುಲ್ಲು ಹೊದೆಸದ ಹಳೆಯ ಚಪ್ಪರದ ಗತಿನೋಡು ಈ ದೇಹ ಕುಸಿಬಿದ್ದರೂ ಜೀವ ಹಿಡಿಯಬೇಕು. ೨ ನೂರು ಹೊರೆ ಕೆಲಸವಿದೆ ಮಜಲು ಮಜಲಿನ ಕೆಳಗೆ ಮೈಬಾಗಿ ದುಡಿ ಬಿಡದೆ ಮೂರು ಹೊತ್ತು; ಮುಖವ...

ವೆಂಕಾ…….? ಮೊದಲೇ ಡೊಂಕಾ ಬಹಳ ಬಿಂಕಾ ಬಣ್ಣ ಬಣ್ಣದ ಮಾತು ಬರಿ ತೂತು, ತೂತು. ಕತ್ತಲೆಯು ಇವನ ಮನೆ ಬೆಳಕು ಕನಸು. ಇವನ ತಕ್ಕಡಿಗಿಲ್ಲ ಸರಿದೆಂಡಿಗೆ ಇವನು ತಿನ್ನುವದು ಕನಸಿನ ಮಂಡಿಗೆ ಇವನ ಮಾಪು ಭಾಪು, ಭಾಪು. ಇವನ ಕಣ್ಣಿನ ಚೂಪು ಶುದ...

೧ ಆಳಬಹುದು ಬೀಳಬಹುದು ಅರಸು ಮನೆತನ ಬೆಳೆಯ ಬೆಳೆದು ಉಂಡು ಉಳಿವ ಮನುಜ ದಿನ ದಿನ ೨ ಹೆಣ್ಣು ಗಂಡು ಕೂಡಿಕೊಂಡು ಜಗವ ಬೆಳಸಿವೆ; ಮಣ್ಣಿಗಾಗಿ ಕೇಣಗೊಂಡು ಸೊಗವನಳಿಸಿವೆ ೩ ಬಾಳಿನೊಡನೆ ಬೆಳೆದು ಬಂದ ಕತೆಯು ಮರೆವುದು; ಕಾಳೆಗವಿರೆ ಜೊತೆ ಬಾಳಿನ ಸಂತೆ ನೆ...

ಹೊಯ್, ಹೊಯ್, ಹೊಯ್, ಬೆಳತ ತಣ್ಗಲ್ಗಳಲಿ, ಕಡಲೇ! ನನ್ನೆದೆಯೊಳೇಳುತಿಹ ಬಗೆಗಳನು ನಾಲಗೆಗೆ ತಂದು ನಾ ನುಡಿಯಲಹುದೇ! ಏನೊಸಗೆ ತೊರೆಯರೆಳೆಯನಿಗೆ! ತಂಗಿಯೊಡನಾಡುತ್ತ ಕೂಗುತಿಹನೇ! ಏನೊಸಗೆ ಅಂಬಿಗರ ಮಗುಗೆ! ತೆರೆಯ ಮೇಲೋಡದಲಿ ಹಾಡುತಿಹನೇ! ಗಂಭೀರದಲಿ ನ...

ನನ್ನ ನಿನ್ನ ನಡುವೆಯೇಕೊ ಏನೊ ವಿರಸ ಸುಳಿಯಿತು, ಮನದ ಕಣ್ಣಿಗದುವು ರಂಗು- ಗಾಜ ತೊಡಿಸಿಬಿಟ್ಟತು! ತಿಳಿಯ ನೀರು ಹೊಳೆವ ನಿನ್ನ ಕಣ್ಣ ತಂಗೊಳದಲಿ ಕಂಡೆನಯ್ಯೊ ಕ್ರೂರ ನ- ಕ್ರಾಳಿಗಳನು ಭಯದಲಿ. ಮಿಂಚಿನಂತೆ ಚಂಚಲಿಸುವ- ಪಾಂಗ ಗರ್ಭದಾಳದಿ ಬಂಡೆಯೆದೆಯ ಒ...

ಇರುವುದು ಕತ್ತಲೆ ಬರುವುದು ಬೆಳಕು ನಮ್ಮಯ ಜಗದಲ್ಲಿ ಇರುವುದು ಬೆಳಕು ಬಾರದು ಕತ್ತಲೆ ಇಂತಹ ಜಗವೆಲ್ಲಿ! ಪೀಡೆಯ ಪರಿಹಾರಕೆ ಮಾರ್ಗವನು ತೋಡುತಿಹೆವು ನಾವು ಪೀಡೆಯೆ ನೋಡಲು ಸಿಗದಂತಿರುತಿಹ ನಾಡ ಕಾಣದಿಹೆವು ಮರವಿನೊಳಿದ್ದು ಅರಿವನು ಗೆದ್ದು ಬಾಳಲು ಹೆ...

1...7891011...933

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...