ಹೇಗೆ ಸುಮ್ಮನಿರಲಿ ತಂದೇ! ಉಸಿರಾಡದೆ ಉಸಿರದೆ, ಮಾತಾಡದೆ ಆಡದೆ ಸಾವಿರಾರು ವರ್ಷಗಳು ಆಳುತ್ತಾ ಬಂದ ದೇವರುಗಳು ಕೋಟ್ಯಾವಧಿ ಮಂದಿಗಳ ಬಡವಾಗಿಸಿರುವುದ ಕಂಡು ಹೇಗೆ ಸುಮ್ಮನಿರಲಿ ತಂದೆ? ಈ ಓಣಿ ಗೂಡುಗಳಲ್ಲಿ ನೆಲಕಚ್ಚಿದೊಡಲುಗಳು, ಗಂಟಲು ಕಚ್ಚಿದ ಹಲ್ಲ...

ಜಿಟಿಜಿಟಿ ಮಳೆಯ ಮುಂಜಾವು ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ! ಮಳೆಯೊಳಗೆ ನೆನೆದ ಪೇಪರ ಹುಡುಗ ಹಾಡುತ್ತ ನಗುತ್ತ ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ ದೇಹಕಂಟಿದ ದುಪಟ್ಟ ಚೂಡಿದಾರ ತೊಯ್ದ ಕೆಲಸದ ಹುಡು...

ಅದೇನು ಕಾರಣವೆಂದರೆ ಘನಕ್ಕೆ ಘನವಾದರು. ಮನಕ್ಕೆ ಮನವಾದರು. ತನುವಿಂಗೆ ತನುವಾದರು. ನಡೆನುಡಿಗೆ ಚೈತನ್ಯವಾದರು. ನೋಡುವುದಕ್ಕೆ ನೋಟವಾದರು. ಕೂಡುವದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದ...

ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು ಬೀಳಲಿ ನಭ ನೆಲಕೆ ತೋಳೊಳಗೆ ಇರುವ ಹರ...

ಧರ್ಮಕ್ಷೇತ್ರದ ಭೂಮಿ ಅಸಮ ಬಲ ಇಕ್ಕಡೆಯೊ- ಳದಮಧ್ಯೆ ಗಂಭೀರ-ಶ್ರೀಕೃಷ್ಣನು. ಕುರುಕ್ಷೇತ್ರ ಕುರುಸೇನೆ ಕೌರವನ ರಣಘೋಷ- ಸೇನಾನಿ ಫಲ್ಗುಣನು ಬಾಣಸಹಿತ. ಕುರುಸೇನಾ ಕಡಲಲ್ಲಿ ತೇಲುತಿಹ ಅರ್ಜುನನ ರಥವೊಂದು-ಸಾರಥಿಯು ಶ್ರೀಕೃಷ್ಣನು; ರೋಷ ಸಹನೆಯ ಮಧ್ಯೆ ಬ...

ಏನಾಗಿದೆ ನನಗೆ ಏನಾಗಿದೆ ನನಗೆ ಎಲ್ಲ ತೊರೆದು ಏಕೆ ಹೀಗೆ ಹಂಬಲಿಸುವೆ ಹರಿಗೆ? ಏನೇ ಇದು ಮಾತೇ ಇಲ್ಲ ಎನುವರು ಜೊತೆ ಸಖಿಯರು ಏನೇ ಮನೆ ಕಳುವಾಯಿತೆ ಎಂದು ಚುಚ್ಚಿ ನಗುವರು ಮನಗೆಲಸದಿ ಮನವಿಲ್ಲ, ಅಮ್ಮ ದಿನಾ ಬಯ್ವರು ಏಕೆ ಹರಿಗೆ ಕಾದು ಕಾದು ನಗೆಗೆ ಗ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....