ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ ಹಿಡಿಯಷ್ಟು ಸಾಮಗ್ರಿಯಿಂದ ಪೂರೈಸಬೇಕು ಎಲ್ಲರ ಇಷ್ಟ ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು ಕಪ್ಪು ಕರಾಳ ಕುರೂಪದೊಳಗೇ ಸುಂದರ ಲೋಕ ತೆರೆದು ತೋರಿಸಬೇಕು ದಿನದಿನವೂ ಹೊ...

ಬಾಲ್ಯದ ಚಪ್ಪಲಿ ಕಳೆದು ಹೋಯಿತು ಯೌವ್ವನದ ಚಪ್ಪಲಿ ಹುಡಿಗಿ ಹಿಂದೆ ತಿರುಗಿ ಸವೆಯಿತು ಸಂಸಾರಿ ಚಪ್ಪಲಿ ಅಲೆದಲೆದು ರಿಪೇರಿ ಆಯಿತು ಮುಪ್ಪಿನ ಚಪ್ಪಲಿ ಹರಿದು ತಿಪ್ಪೇಸೇರಿ ಮಣ್ಣಲ್ಲಿ ಗೋರಿಯಾಯಿತು *****...

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು; ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ ಅಂಬರದಲಿ ಮಿಂಚಿದೆ ನಿನ್ನ ಕ...

ಸೂರ್ಯ ನಿನ್ನದೆಂಥಾ ಬಿಸಿಲೋ ನಮ್ಮ ಹೊಟ್ಟೆಯ ಹಸಿವಿನ ಮುಂದೆ ಸುಡು ಹಸಿಹಸಿ ಹಸಿವ ಬಿಸಿಲಿರಲಿ ಹೊಂಬಿಸಿಲಾಗಿ ಮೋಡಗಳೇ ನಿಮ್ಮದೆಂಥಾ ಮಳೆಯೋ ನಮ್ಮ ಬಡತನದ ಕಣ್ಣೀರಿನ ಮುಂದೆ ಸುರಿ ಬಡತನ ಬಡವಾಗುವ ಮಳೆಯ ಹೊನ್ಹೊಳೆಯ ಬಿರುಗಾಳಿಯೇ ನಿನ್ನದೆಂಥಾ ಆರ್ಭಟವ...

ಗಾಳಿಗೆ ತೂಗಾಡುವ ಬಿದಿರ ಚಿಂತೆ ಇಂತು ಗಾಳಿಯನೇ ಆಡಿಸುವ ಬಾಳಾಗುವುದೆಂತು? ಸಿಕ್ಕಿಬಿದ್ದೆ ಮೆಳೆಯಲಿ ಮೈಯೆಲ್ಲಾ ಮುಳ್ಳು ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು ಪಾದ ಹುಗಿದು ಮಣ್ಣಲಿ ಕನಸಾಡಿದೆ ಕಣ್ಣಲಿ ಕಾಯುತಿರುವೆ ಕಡಿವವನಿಗೆ ಬಾಳಾಗಲು ನ...

ನಾಡ ನಾಯಕನೊಡನೆ ನಾವ್ ಬೇಡುತಿಹೆವು: ನೀಡು ಬಿಡುಗಡೆ ನಾಡಿಗೆಲ್ಲರಿಗೆ ಶುಭವ. ನೂರಾರು ಪಂಥಗಳ ನುಗ್ಗುನುರಿ ಮಾಡು ಬೇರೆ ಬೇರಾದವರನೊಮ್ಮತಕೆ ಹೂಡು ದಾರಿ ತಿಳಿಯದೆಹೋದ ಜನಕೆ ಮತಿ ನೀಡು ಬೀರಿ ಶಾಂತಿಯನಿಳೆಗೆ, ದೇವ, ಕಾಪಾಡು. (ಆಗಸ್ಟ್ ೯,೧೯೪೪: ಕ್ವ...

ಮಾಮರದ ತೋಪಿನಲಿ ಚೆಂದಿರನ ಬೆಳಕಿನಲಿ ಕೊಳದ ಸೋಪಾನದಲಿ ಕುಳಿತಿರುವಳಿವಳಾರು? ನೀರಿನಂಚಿಗೆ ಸರಿದು ತೊಯ್ಸಿಹಳು ನಿರಿಗಳನು ಕಾಲ್ಗಳನು ಚಾಚುವಳು ಮುದುರುವಳು ಕ್ಷಣಕೊಮ್ಮೆ ಉಬ್ಬಿಹುದು ಇವಳೆದುಯು ನಿಟ್ಟುಸಿರ ಬಿಡುತಿಹಳು ಜೀವದಾಶೆಯ ತೊರೆದು ಕುಳಿತಿಹಳ...

ಹೆತ್ತಾಗ ಹೆಣ್ಣಿಗಾಗುವ ನೋವು ದಾದಿಗೆ ಗೊತ್ತು! ಬಸರಿಗೆ ಬೆವರ ಬಸಿದ ಗಂಡಿನ ನೋವು ಎಷ್ಟು ಜನರಿಗೆ ಗೊತ್ತು? * ನಮ್ಮಲ್ಲಿ: ಸಾಫ್ಟ್‌ವೇರ್‍, ಹಾರ್ಡವೇರ್‍, ಅಂಡರ್‍ ವೇರ್‍ ಇಂಜಿನಿಯರುಗಳು! * ದೇವರಿಗೆ ಭಕ್ತರಿಗೆ ಬಲು ಹತ್ತದಾನಂಟು. ಈಗೀಗ ಪೂಜಾರಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....