ಬಾಲ್ಯದ ಚಪ್ಪಲಿ
ಕಳೆದು ಹೋಯಿತು
ಯೌವ್ವನದ ಚಪ್ಪಲಿ
ಹುಡಿಗಿ ಹಿಂದೆ ತಿರುಗಿ
ಸವೆಯಿತು
ಸಂಸಾರಿ ಚಪ್ಪಲಿ
ಅಲೆದಲೆದು
ರಿಪೇರಿ ಆಯಿತು
ಮುಪ್ಪಿನ ಚಪ್ಪಲಿ
ಹರಿದು ತಿಪ್ಪೇಸೇರಿ
ಮಣ್ಣಲ್ಲಿ ಗೋರಿಯಾಯಿತು
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)