ಹೆತ್ತಾಗ
ಹೆಣ್ಣಿಗಾಗುವ
ನೋವು
ದಾದಿಗೆ
ಗೊತ್ತು!
ಬಸರಿಗೆ
ಬೆವರ ಬಸಿದ
ಗಂಡಿನ
ನೋವು
ಎಷ್ಟು
ಜನರಿಗೆ
ಗೊತ್ತು?
*
ನಮ್ಮಲ್ಲಿ:
ಸಾಫ್ಟ್‌ವೇರ್,
ಹಾರ್ಡವೇರ್,
ಅಂಡರ್ ವೇರ್
ಇಂಜಿನಿಯರುಗಳು!
*
ದೇವರಿಗೆ
ಭಕ್ತರಿಗೆ
ಬಲು ಹತ್ತದಾನಂಟು.
ಈಗೀಗ ಪೂಜಾರಿ
ಕೈಗೆ ಸಿಕ್ಕು
ದೇವರು
ದೂರ… ದೂರ
ಆಗಲುಂಟು!
*
ಜಿಟಿ… ಜಿಟಿ…
ಮಳೆ
ಜೇನಿನ
ಹೊಳೆ!
ರಪಽ… ರಪಽಽ…
ಮಳೆ
ಬಾನಿನ
ರಗಳೆ!
*
ಕವಿತೆಯೆಂದರೆ…
ಜಗತ್ತು!
ಅಂಡಾಂಡ
ಪಿಂಡಾಂಡ
ಬ್ರಹ್ಮಾಂಡ.
*****