ಸಪ್ಪುಳಾಗುತಿಹುದು ಅಲ್ಲೀ ಅಪ್ಪ ಬಂದನೇನೊ ನೋಡೂ ಒಪ್ಪದಿಂದ ಪಾದ ತೊಳೆದು ಅರ್ಪಿಸುವೆನು ಕಾಣಿಕೆಯನು ಘಲು ಘಲೆಂಬುದೇನೊ ಓಹೋ ನಳಿನನಾಭ ಬಂದನೇನೊ ಒಳಗೆ ಕರೆದು ಕರವ ಮುಗಿದು ಬೆಳಗಿಸುವೆನು ಧೂಪ ದೀಪ ಬಂಧುವೆನ್ನ ಭಾಗ್ಯನಿಧಿಯಗೊ ಬಂದನೇನೊ ನೋಡು ನೋಡು ...

ಹ್ಯಾಮ್ಲೆಟ್ಟು ನಾನಾಗಿ ಕ್ವಿಕ್ಸೋಟನಾಗಿ ಬಣ್ಣಬಣ್ಣದ ಉದ್ದ ಟೊಪ್ಪಿಗೆ ಧರಿಸಿ ಆಡಿದ್ದು ಮೂರು ಬೀದಿಗಳ ಮಧ್ಯೆ ನಿಂತು ಸಾಕ್ರೆಟಿಸ್ ಮರೆತದ್ದು ನಾನು ಸಾರುವೆನೆಂದು ಬೊಗಳಿದ್ದು ಈ ಮನೀಷೆ ಈ ಒಳತೋಟಿ ಅನುಭವಿಸಿ ಅನುಭವಿಸಿ ಸೋತು ಸುಸ್ತಾಗಿ ಯಶೋಧರೆಯ ...

ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ ಹುಡುಕಾಡುತ್ತಿದೆ ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ ಹಸಿರ ರೆಂಬೆ ಕೊಂಬೆಗಾಗಿ ಕಾಯುತ್ತಿದೆ ಹಕ್ಕಿ ಮೇಲೆ ದಿಟ್ಟಿ ಕೆಳಗೆ ಹಾರುವ ಹಕ್ಕಿಗೂ ಕನಸು ಸ್ವಂತ ಸೂರಿನ ಬದುಕು ರೆಕ್ಕೆ ಬಿಚ್ಚಿದಂತೆ ಕನಸಬಿಚ್ಚಿದ ಹಕ್ಕಿಗೆ ಮಧು...

ಏರುವ ಎತ್ತರಕೆ ಬಾನೆ ಗುರಿ ಹಾರುವ ಬಯಕೆಗೆ ದಾರ ಮಿತಿ! ಭಾರ ಹೇರಿ ತೂಗುವ ನೂರೆಂಟು ಬಾಲಂಗೋಚಿಗಳು ನುಗ್ಗುವ ಉತ್ಸಾಹಕೆ ಎದುರಾಗುವ ಆಳೆತ್ತರ ಗೋಡೆಗಳು! ಗುರುತ್ವಾಕರ್ಷಣೆಯ ಎದೆಗೊದ್ದು ಅಟ್ಟಹಾಸದಿ ಮೇಲೇರಿ ಹಾರಿ ಮೆರೆವ ಬಯಕೆಗೆ ಅಡ್ಡಿ ಸೂತ್ರಧಾರಿ...

ನನಗೀಗ ಸಹಸ್ರನಾಮಗಳಲ್ಲಿ ಆಸಕ್ತಿಯಿಲ್ಲ, ಒಮ್ಮೊಮ್ಮೆ ನನ್ನ ಹೆಸರೂ ಸೇರಿದಂತೆ ಹೆಸರುಗಳು ನನಗೆ ನೆನಪಿರುವುದಿಲ್ಲ, ಹೆಸರುಗಳ ಗೊಡವೆಯೇ ಬೇಡವಾಗಿದೆ “ಇದು ಹೋಗಿ ಅದಾಗಿದ್ದರಿಂದ, ನನಗೇನು ಇದಾಗುವುದಿಲ್ಲವಾದ್ದರಿಂದ ಅದರಿಂದ ನನಗೆ ಎದಾಗಬೇಕು&...

ರೊಕ್ಕದ ಲೀಲೆಯು ದೊಡ್ಡದೋ ಜಗದಿ ರೊಕ್ಕದ ಮಹಿಮೆಯು ದೊಡ್ಡದೋ ಕಾಮದ ದಾಹಾ ಕರುಳಿನ ದಾಹ ಹಸಿವು ನೀರಡಿಕೆಗಳ ದಾಹವುಂಟು ನೋಡುವ ಮೂಸುವ ತಿನ್ನುವ ಸವಿಯುವ ಕೇಳುವ ದಾಹಾ ದೇಹಕ್ಕುಂಟು ಪ್ರೀತಿಯ ದಾಹಾ ಸ್ನೇಹದ ಮೋಹಾ ನಾನೂ ನೀನೂ ಜೀವಕೆ ಜೀವ ಎಲ್ಲ ದಾಹಗಳ...

ಆರದಿರಲಿ ಆಸೆ ಉರಿಗೆ ಬೀಳದಿರಲಿ ಕನಸು, ನೋಯದಿರಲಿ ಭಾರ ಹೊತ್ತ ಬಡವರ ಹೂಮನಸು. ಯಾರ ಅನ್ನ ಎಲ್ಲೋ ಬೆಳೆವ ರೈತನ ಬಲದಾನ ಯಾರ ಭಾರ ಏಕೋ ಹೊರುವ ಕೂಲಿಯವನ ಮಾನ ಬೀದಿ ಗುಡಿಸಿ ಕೊಳೆನೆಲದಲಿ ಮಲಗುವವನ ನೇಮ ಕಾಯುತ್ತಿವೆ ನಮ್ಮ, ಅವರೆ ಈ ನಾಡಿನ ಪ್ರಾಣ ಗು...

ಕೇಳಿದ್ದೆವು ಗಗನಸಖಿಯರೆಂದಷ್ಟೆ ಯಾವ ಮಾಯಾಲೋಕದವರಿವರು- ತೆಳ್ಳನೆಯ ದೇಹ ಗುಲಾಬಿ ಬಣ್ಣ ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು ತಿಳಿನಗೆ ಹೊಳಪು ಕಣ್ಣು ತುದಿಗಾಲಲಿ ನಡೆವ ನವಿಲೆಯರು ಬೆಡಗು ಬಿನ್ನಾಣಗಿತ್ತಿಯರು ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....