ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ
ಹುಡುಕಾಡುತ್ತಿದೆ
ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ
ಹಸಿರ ರೆಂಬೆ ಕೊಂಬೆಗಾಗಿ
ಕಾಯುತ್ತಿದೆ
ಹಕ್ಕಿ ಮೇಲೆ
ದಿಟ್ಟಿ ಕೆಳಗೆ
ಹಾರುವ ಹಕ್ಕಿಗೂ
ಕನಸು
ಸ್ವಂತ ಸೂರಿನ
ಬದುಕು
ರೆಕ್ಕೆ ಬಿಚ್ಚಿದಂತೆ
ಕನಸಬಿಚ್ಚಿದ ಹಕ್ಕಿಗೆ
ಮಧುಚಂದ್ರದ ತವಕ
ಹಸಿರು ರೆಂಬೆಗಾಗಿ
ಹುಡುಕುವಾಟ
ಮೊಟ್ಟೆ ಇಟ್ಟು
ಕಾವ ಕೊಟ್ಟು
ಮುದ್ದು ಮರಿಯ
ಭೂವಿಗೆ ಇಟ್ಟು
ಕೊಕ್ಕು ತೆರೆದ
ಬಾಯಿಗಿಷ್ಟು ಗುಟುಕು
ಕನಸುವ ಹಕ್ಕಿ ಈಗ
ಒಣರೆಂಬೆಯ ಮೇಲೆ
ಸುದ್ದಿ ಕಳಿಸಿ ಬೇಗ
ಹಸಿರ ಉಸಿರಿರುವ ಜಾಗ
*****