ನನಗೀಗ ಸಹಸ್ರನಾಮಗಳಲ್ಲಿ ಆಸಕ್ತಿಯಿಲ್ಲ, ಒಮ್ಮೊಮ್ಮೆ ನನ್ನ ಹೆಸರೂ
ಸೇರಿದಂತೆ
ಹೆಸರುಗಳು ನನಗೆ ನೆನಪಿರುವುದಿಲ್ಲ, ಹೆಸರುಗಳ ಗೊಡವೆಯೇ
ಬೇಡವಾಗಿದೆ
“ಇದು ಹೋಗಿ ಅದಾಗಿದ್ದರಿಂದ, ನನಗೇನು
ಇದಾಗುವುದಿಲ್ಲವಾದ್ದರಿಂದ
ಅದರಿಂದ ನನಗೆ ಎದಾಗಬೇಕು” ಬಿಡಿ
ನಿಜ ಇದು ಸ್ವಲ್ಪ ಅಪ್ರಿಯ
ಆದರೇನು ಮಾಡುವುದು
ನಾನೀಗ ಸರ್ವನಾಮಪ್ರಿಯ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)