Home / ಕವನ / ಕವಿತೆ / ಗಗನ ಸಖಿಯರು ೧

ಗಗನ ಸಖಿಯರು ೧

ಕೇಳಿದ್ದೆವು ಗಗನಸಖಿಯರೆಂದಷ್ಟೆ
ಯಾವ ಮಾಯಾಲೋಕದವರಿವರು-

ತೆಳ್ಳನೆಯ ದೇಹ ಗುಲಾಬಿ ಬಣ್ಣ
ಮೈಗೊತ್ತಿದ ಸೀರೆ ಎತ್ತಿಕಟ್ಟಿದ ಕೂದಲು
ತಿಳಿನಗೆ ಹೊಳಪು ಕಣ್ಣು
ತುದಿಗಾಲಲಿ ನಡೆವ ನವಿಲೆಯರು
ಬೆಡಗು ಬಿನ್ನಾಣಗಿತ್ತಿಯರು

ಮೆಲ್ಲಗೆ ಕೈ ಮುಗಿದು ಸ್ವಾಗತಿಸಿ
ಕುಕಿಲಾಗಿ ಮಾತನಾಡಿ ಸೀಟಿಗೊರಗಿಸಿ
ಚುಟುಕಾಗಿ ಸಲಹೆಕೊಡುವ ಮಾರ್ಗದರ್ಶಿನಿಯರು

ಕಳ್ಳ ನೆಪಮಾಡಿ ಅದುಬೇಕು ಇದುಬೇಕೆನ್ನುತ
ಸೀಟುಬಟನ್ ಅದಮುವ, ಹತ್ತಿರವಾದಂತೆ
ಸುಮ್ಮಸುಮ್ಮನೆ ಕಾಡುವ ಏಕಾಂಗಿಗಳ ಗೆಳತಿ

ತೊಟ್ಟಿಲುಕಟ್ಟಿ ಅಮ್ಮನ ಕೈ ಹಗುರಾಗಿಸಿ
ಬಂಡಲ್ ಕಥೆಗಳ ಏಣಿಏರಿಸಿ
ಕಾಣದ ಆಕ್ಟೋಪಸ್ ತೋರಿಸಿ ಮಕ್ಕಳಿಗೆ
ಬೆರಗಾಗಿಸುವ ಕಿಂದರಜೋಗಿ ಆಂಟಿ

ಟ್ಯಾಕ್ಸ್ ಪ್ರೀ ವೈನ್ ವಿಸ್ಕಿಗಳ ಸೆಳೆತ
ಸುಳಿದಾಡುವ ಹುಡುಗಿಯ ಥ್ರೀ ಡೈಮೆನ್ಶನ್,
ಮತ್ತೆ ಮತ್ತೆ ಗ್ಲಾಸಿಗೆ ಸುರಿಸಿಕೊಳ್ಳುತ
ಸ್ಪರ್ಷ ನೆಪದ ಕುಡುಕರಿಗೆ ಸಾಕಿ

ಮೂರ್ಖ ಶಿಖಾಮಣಿ ವಿದೇಶದಲ್ಲಿ ಆಪರೇಶನ್
ಪಾಪ! ಅಜ್ಜಿಗೆ ಮಂಡಿನೋವು
ಔಷದೋಪಚಾರ ವಯಸ್ಸಾದವರಿಗೆಲ್ಲ ದಾದಿ

ನೂರೆಂಟು ಮಾತು ತುಟಿಯಲಿ ಅರಳಿಸಿ
ಕಣ್ಣಲೇ ಮಾತನಾಡಿ ಬೇಕುಬೇಡದ್ದಕ್ಕೆಲ್ಲಾ
ಪ್ರೀತಿಯೊತ್ತುವ ಗೆಳತಿ ಪೈಲಟ್ ನಿಗೆ ಸ್ಪೂರ್ತಿ

ಊಟ ತಿಂಡಿತೀರ್ಥ
ಪೇಪರು ರಗ್ಗು ದಿಂಬು ಕೊಟ್ಟು ಎತ್ತಿಟ್ಟು
ಶುಚಿಗೊಳಿಸಿ ಪ್ರಸನ್ನಿಸುವ ಪರಿಚಾರಿಕೆ

ಪಯಣದ ಗೆಳತಿ ಗಗನಸಖಿ
ಮೋಡಿ ಮಾಡುವ ಹಸನ್ಮುಖಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...