
ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....
ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! *****...
ಚಂಗನೆ ಚಿಮ್ಮಿ ಗಕ್ಕನೆ ದಾಟಿ ಗೆರೆ ಮುಟ್ಟದ ಜಾಣ್ಮೆ ಕನಸಿನಂಗಳವ ಮುಟ್ಟಿ ದಾಟಿದೆ ಮನೆಯಿಂದ ಮನೆಗೆ ನನ್ನ ಫೇವರೇಟ್ ಬಚ್ಚೆ ಮನ ಭಾರವನೊಮ್ಮೆ ಇಳಿಸಿ ಗೆದ್ದ ಹೆಮ್ಮೆ ಮಿನುಗಿದೆ ಕಣ್ಬೆಳಕು ಥಳಥಳ ನಕ್ಷತ್ರಗಳ ಗೊಂಚಲು ಅದೆಷ್ಟು ಗಳಿಗೆ ಈ ಹಮ್ಮುಬಿಮ್ಮ...
ಹೆಪ್ಪಿಟ್ಟ ಕೆನೆ ಮೊಸರು ಹುಳಿಯಾಗುವ ಮುನ್ನ ನಿರಂತರ ಕಡೆಯಬೇಕು! ಉಕ್ಕಲಿ ನೊರೆನೊರೆಯ ಹಾಲಾಹಲ! ಏಕೆ ಕೋಲಾಹಲ? ಮೇಲೆಲ್ಲವೂ ಕಾರ್ಕೋಟಕ ವಿಷವೇ ಆಳಕ್ಕಿಳಿದಷ್ಟೂ ಅಮರತ್ವದ ಅಮೃತವೇ! ಎಷ್ಟು ಮಹಾ ಉಕ್ಕೀತು ವಿಷ? ಆಪೋಶಿಸಿದರೊಂದೇ ಗುಟುಕು ಕಣ್ತೆರೆಯಲು...
ಸೃಷ್ಟಿ ಚಿಮ್ಮಿದೇ; ಪಕ್ಕ ಬಡೆದು ಹಾರಿದೆ ಅತ್ತಲಿತ್ತ ಸುತ್ತು ಓಡಿ ಉಕ್ಕಿ ಹರಿದಿದೆ ಮೊಗ್ಗೆಯಲ್ಲಿ ನೆಗೆದು ಪಕಳೆರೂಪ ತಾಳಿದೆ ಅಗ್ಗ ಹುಲ್ಲಿನಲ್ಲಿ ಸಗ್ಗ ಸೊಗವ ತುಂಬಿದೆ ಭ್ರಮರವಾಗಿ ಬಂದಿದೆ, ಹೂವಾಗಿ ಕರೆದಿದೆ ಭ್ರಮೆಗೆಟ್ಟು ಭ್ರಮಿಸುವಾ ಕಬ್ಬಿಗ...
ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ; ಕಾಳಗದಲಿ ಗೆದ್ದೆ ನಿಜ, ಅದಕಿಂತಲು ಮಿಗಿಲು ಗದ್ದೆ ನೀನು ನಿನ್...













