ನೂರು ಬಣ್ಣದಲಿ ಊರು ನಗುತಿರಲು ಗಿರಿಯ ತಪ್ಪಲಲ್ಲಿ ಬಾಳಿನ ಚೆಲುವನು ಹಸಿರು ಬರೆದಿರಲು ಬೆಟ್ಟದ ಮೈಯಲ್ಲಿ ಕೈಯ ಬೀಸಿ ಕರೆಯುತ್ತಿರೆ ಜೀವನ ಸಾವಿರ ಕೈಗಳಲಿ ಕಣವೂ ಚಲಿಸದೆ ಕಣ್ಣೇ ಹರಿಸದೆ ಕುಳಿತನಲ್ಲ ವೀರ ಯಾರೀ ದಿಟ್ಟ ಫಕೀರ? ಮಿಂಚು ಸಿಡಿಲು ಮಳೆಗಾಳ...

ತಾನೊಂದು ರಂಭೆ ಅಂದುಕೊಂಡಂತಿದೆ ನನ್ನ ಪಕ್ಕದ ಸೀಟಿನಾಕೆ ಪಾರ್ಲರ್ ದಿಂದ ನೇರ ವಿಮಾನಕ್ಕೇರಿದ ಮೂವತ್ತರ ಬೆಡಗಿ ಥೇಟ್ ಐಟಮ್ ಸಾಂಗ್ ಗರ್ಲ್ ಗುಲಾಬಿ ಬಣ್ಣ ತಲೆತುಂಬ ಹುಚ್ಚೆದ್ದ ಕೂದಲು ಉದ್ದನೆಯ ಉಗುರು ಮೇಲೆ ಕಪ್ಪುಬಣ್ಣ ಕೂತಲ್ಲಿ ಕೂರಲಾರೆ ನಿಂತಲ್...

ಕಾರುಣ್ಯದಾ ಬೆಳಕೆ ಬಾ ಬೇಗ ಬಾ ನನ್ನೆದೆಯ ಬಾಂದಳವ ಬೆಳಗಿಸಲು ಬಾ ನಿನ್ನಲ್ಲಿ ಆನಿಂದು ಬೇಡಿಕೊಳ್ಳುವೆ ನಿನ್ನು ಕೃಪೆಯಿಟ್ಟು ಆಲಿಸೆನ್ನೀ ಮೊರೆಯನ್ನು ಮುಗಿಲಗಲ ಜಗಕೆಲ್ಲ ರಸವೃಷ್ಟಿ ಸುರಿಸು, ರವಿ ಶಶಿ ತಾರಾಹೊಳಪನ್ನು ನಮ್ಮ ಕಣ್ಣುಗಳೊಳಗಿರಿಸು, ಮೇ...

ಸೂರ್ಯ ಕಂತಿದ್ದಾನೆ ಅವಳು ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ ಧೂಳು ಕಾಲುದಾರಿಯಲ್ಲಿ ಉಸುಕಿನಲ್ಲಿ ಅವಳ ಹೆಜ್ಜೆಗಳು ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ. ಮಗಳು ಈ ದಿನ ಯಾಕೋ ಮಂಕಾಗಿದ್ದಳು ಹಾರಿ ಬರುವ ಹಗಲ ಬಿಸಿಲಿಗೆ ಹೆದರಿದ್ದಾಳೆ, ...

ನಿನ್ನ ಹಸಿವ ಹಿಂಗಿಸಲಿಲ್ಲವೆಂದು ಬಯ್ಯಬೇಡ. ಈ ಪುಣ್ಯ ಭೂಮಿಯಲಿ, ಪವಿತ್ರ ನದಿಗಳ ಸಂಗಮವಿದೆ ನಿನ್ನ ಹೊಟ್ಟೆ ತಣ್ಣಗಿಡಲು. ಪದಕಗಳಿಸುವ ವಿದ್ಯೆ ಕಲಿಸಲಿಲ್ಲವೆಂದು ಜರಿಯ ಬೇಡ. ಋಷಿ ಮುನಿಗಳ ವೇದ ಗ್ರಂಥಗಳಿವೆ ನೀನು ಸಂಸ್ಕಾರ ಹೊಂದಲು. ನಡುರಾತ್ರಿಯ ...

ಇಂದು ನೀ ಬಂದಿರುವೆ. ನನ್ನ ಬಾಳಿನ ಹಗಲು- ಹರಿಗೋಲು. ಹುಚ್ಚು ಹೊಳೆ ಕರೆಗಿನ್ನು ಬೆಚ್ಚಿಲ್ಲ ! ಕಾರ್ಗತ್ತಲೆಯ ಕಂಡು, ಮೊಗ್ಗಾದ ಮನದರಳು ಉಷೆ ಬರಲು, ಕಮಲದೊಳು ಕಂಪಿನಿಂ ಸುಖಸೊಲ್ಲ ಹರಹುತಿದೆ, ಮೈಯರಿತು ! ಕೊನೆತನಕ ನೀನುಳಿದು ಜತೆಗಿರಲು, ಚಿಂತೆಯನ...

ನನ್ನ ಹೊರಗಿನ ಜೀವಿತದಲ್ಲಿ ಹೆರರ ಮುಖವಾಡಗಳ ನೆರಳು ನನ್ನೊಳಗಿನ ಜೀವಿತದಲ್ಲಿ ನನ್ನದೇ ಮುಖವಾಡಗಳ ನೆರಳು. ಸೋಮವಾರಕ್ಕೆ ಬೂದು ಮುಖವಾಡ ಶನಿವಾರಕ್ಕೆ ಕಪ್ಪು ಮುಖವಾಡ ಆದಿತ್ಯವಾರವೋ ರಂಗು ರಂಗಿನ ಮುಖವಾಡ ಬನ್ನಿ ನಿಮ್ಮ ಮುಖಕ್ಕೂ ಬೇಕು ಒಂದು ಆವರಣ ಕ...

ಮೌನದ ಚಿಪ್ಪೊಳಗೆ ನುಸುಳಿ ಗುಪ್ತಗಾಮಿನಿಯಂತೆ ಹರಿದು ಅಜ್ಞಾನದಲ್ಲಿಯೇ ಅಸ್ತಿತ್ವವಿಲ್ಲದ ಅಗೋಚರಗಳ ನಡುವೆ ನರಳಿ ಬೂದಿಯಾದ ಕನಸುಗಳು ಹೊರಳಿ ಬದುಕ ಬಯಲ ದಾರಿಯಲಿ ಮೇಣದಂತೆ ಕರಗಿ ಕೊರಗಿ ಹುಟ್ಟೇ ಶಾಪ, ತಾರತಮ್ಯ ವಾಸ್ತವ ನಾಳೆಗಳಿಲ್ಲದ ಬದುಕಲಿ ಬಿಂದ...

ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ… ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....