ಇಂದು ನೀ ಬಂದಿರುವೆ. ನನ್ನ ಬಾಳಿನ ಹಗಲು-
ಹರಿಗೋಲು. ಹುಚ್ಚು ಹೊಳೆ ಕರೆಗಿನ್ನು ಬೆಚ್ಚಿಲ್ಲ !
ಕಾರ್ಗತ್ತಲೆಯ ಕಂಡು, ಮೊಗ್ಗಾದ ಮನದರಳು
ಉಷೆ ಬರಲು, ಕಮಲದೊಳು ಕಂಪಿನಿಂ ಸುಖಸೊಲ್ಲ
ಹರಹುತಿದೆ, ಮೈಯರಿತು ! ಕೊನೆತನಕ ನೀನುಳಿದು
ಜತೆಗಿರಲು, ಚಿಂತೆಯನು ನೂಕುವೆನು ಮೊಗೆ ಮೊಗೆದು!
*****