ಜೋಜೋ ಜೋಜೋ ಜೋಜೀಜಿ ಜೋಜೋ ತಾಯಿಯಿಲ್ಲದ ಕಂದ ಜೋಜೋ ಲಾಲೀ ಲಾಲೀ ಲಾಲೀ ಲಾಲೀ ತಂದೆಯಿಲ್ಲದ ಕಂದ ಜೋಜೋ ಕಮಲದ ಹೂ ನೀನು ಹವಳದ ಕುಡಿ ನೀನು ತುಂತುಂ ತುಂಬಿದಾ ಸುವ್ವಾಲಾಲಿ ಚಂದ್ರಲೋಕದ ಬೆಣ್ಣಿ ಸೂರ್ಯಲೋಕದ ತುಪ್ಪ ಚುಂಚಂ ಚುಂಚುಂ ಚಂದ್ರಲಾಲಿ ನನಸೀರಿ ನ...

ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು ಅಲೆ. ನೀರಿನ ವಿಶಾಲ ಕನ್ನಡಿ ಹೊಳೆಯುತ್ತ ಬಿದ...

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ ಮಲ್ಲಿಗೆ. ಮೆದು ಹಸಿರು ಎಳೆಹೆಸರುಚಾಪೆ ಹಾಸಿ ತಿಳಿಗಾಳಿಸ...

ನಿನ್ನ ಬಗೆಗೆ ಎಷ್ಟೊ ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ ಎಂದೆ- ಬೆಚ್ಚಿಬಿದ್ದೆ, ತಿರುಕನ ಕನಸಿನಂತಾದೀತು ತಿರುಕಿಯಾಗಬೇಡ ಎಂದಾಗ....

ನನ್ನ ಕಾರೀಗ ಟೀಪಾಟ್ ಆಗಿದೆ ಇಲ್ಲದಿದ್ದರೆ ನೀನದನ್ನ ಉಪಯೋಸಬಹುದಿತ್ತು -ಎಂದಳು ಏಂಬರ್ ನಾನು ಭಾರತ ಬಿಡುವ ಮೊದಲು ಹೇಗೆ? ಹೇಗೆಂದರೆ ಹೇಗೆ- ಸಾರೋಟಾಗಲಿಲ್ಲವೆ ಕುಂಬಳ ಕಾಯಿ! ಏಂಬರಿನ ಕಾರಿಗೆ ದುಂಡನೆ ಹೊಟ್ಟೆ ಕೈಬಾಯಿ ಹಿತ್ತಾಳೆಯ ಮೈ ಬರುವುದನ್ನ ...

ಪಡುವಣದ ಕಡಲಿನೊಳು ಪರಮಾಪ್ತ ಪರಧಿಯೊಳು ನೇಸರನ ಮಡಿ ಸ್ನಾನ ಚಿಮ್ಮಿಸಿದೆ ಧರೆಯೊಳಗೆ ಕೆಂಬಣ್ಣ ಹೊಂಬಣ್ಣ ನೀರಿನಾಳದಲಿ ಫಳಫಳನೆ ಮಿಂಚಿ ಮತ್ಸ್ಯಗಳು ಕುಣಿದಿರೆ ಅಂಬುಧಿಯ ತಟದೊಳಗೆ ಕೌಪೀನ ಕಳಚಿ ಮರಿ ಮತ್ಸ್ಯಗಾರರು ಉಬ್ಬರಿಸ ಅಲೆಯೊಳಗೆ ಜೋಕಾಲಿ ಆಡುತಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...