ಪಡುವಣದ ಕಡಲಿನೊಳು
ಪರಮಾಪ್ತ ಪರಧಿಯೊಳು
ನೇಸರನ ಮಡಿ ಸ್ನಾನ
ಚಿಮ್ಮಿಸಿದೆ ಧರೆಯೊಳಗೆ
ಕೆಂಬಣ್ಣ ಹೊಂಬಣ್ಣ
ನೀರಿನಾಳದಲಿ ಫಳಫಳನೆ
ಮಿಂಚಿ ಮತ್ಸ್ಯಗಳು ಕುಣಿದಿರೆ
ಅಂಬುಧಿಯ ತಟದೊಳಗೆ
ಕೌಪೀನ ಕಳಚಿ
ಮರಿ ಮತ್ಸ್ಯಗಾರರು
ಉಬ್ಬರಿಸ ಅಲೆಯೊಳಗೆ
ಜೋಕಾಲಿ ಆಡುತಿರೆ
ಕಡಲ ತಟದಲಿ ತಾಯಿ
ಮಂದಸ್ಮಿತ ವದನದಲಿ
ಹುಸಿಮುನಿಸ ತೋರುತಿರೆ
ಆ ಬಯಲು ಈ ತೀರ
ಆಚೆ ಪರ್ವತಗಳ ಸರಳು
ಕಡಲ ರಾಜನ ಮಾಡು
ತರಂಗಗಳ ಗೂಡು
ಮಿರುಪ ಬೆಳ್ಳಿ ಮೋಡ
ನೀಲಾಕಾಶದೊಳು
ಮಿಂಚು ಸೆಳದಂತೆ ಧರೆಯೊಳು
ಸ್ವರ್ಗಕ್ಕಿಂತಲೂ ಮಿಗಿಲು
ಈ ಪ್ರಕೃತಿ ಒಡಲು
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.