ಜೋಜೋ ಜೋಜೋ ಜೋಜೀಜಿ ಜೋಜೋ
ತಾಯಿಯಿಲ್ಲದ ಕಂದ ಜೋಜೋ
ಲಾಲೀ ಲಾಲೀ ಲಾಲೀ ಲಾಲೀ
ತಂದೆಯಿಲ್ಲದ ಕಂದ ಜೋಜೋ

ಕಮಲದ ಹೂ ನೀನು ಹವಳದ ಕುಡಿ ನೀನು
ತುಂತುಂ ತುಂಬಿದಾ ಸುವ್ವಾಲಾಲಿ
ಚಂದ್ರಲೋಕದ ಬೆಣ್ಣಿ ಸೂರ್ಯಲೋಕದ ತುಪ್ಪ
ಚುಂಚಂ ಚುಂಚುಂ ಚಂದ್ರಲಾಲಿ

ನನಸೀರಿ ನೀ ಹಿಡಿದಿ ನೀನಪ್ಪ ನನಗೆಂದಿ
ಅವ್ವೀ ಅವ್ವೀ ಸುವ್ವಾಲಾಲೀ
ನನ್ನೆದಿಯ ನೀ ಹಿಡಿದ ಎದೆಹಾಲು ನೀ ಕುಡಿದಿ
ಕೂಡೀ ಕೂಡೀ ಕೂಡೀದಿದೀ

ನಿನ್ನ ಸಿಂಗರ ಮೂಗು ನನಗಲ್ಲ ಮುತ್ತಿಟ್ಟೆ ! ನಾನಾ
ಮುತ್ತಿ ಮುತ್ತೀ ನೀನೊತ್ತೊತ್ತಿ
ಉತ್ತತ್ತಿ ಕಣ್ಣೊತ್ತಿ ಕಜ್ಜೂರ ಮೈಯೊತ್ತಿ
ಹತ್ತಿ ಹತ್ತಿ ಮೈಹತ್ತತ್ತಿ

ಅಪ್ಪಪ್ಪಿ ಗಪ್ಪಾದಿ ನಿನ್ನೊಳಗು ಬೆಪ್ಪಾದಿ
ಬೆಪ್ಪೂ ಒಪ್ಪೂ ಪೈಯಾಲಿಪೀ
ಶಿಶುವಾಗಿ ಬಂದೋನು ಸಾಗರಾ ನೀನಾದಿ
ತುಂತುಂ ತುಂತುಂ ಥೈಯಾಲಿಪೀ