
ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ ಉಂಡ ಅನ್ನದ ಋಣವ ತೀರಿಸದೆ ಏಕಿಂತು ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ? ಕನ್ನಡದ ಈ ನಾಡು ಸಿಂಗರದ ಬೀಡು ಸಿಂಗರದ ಈ ಬೀಡು ಕವಿಗಳೆದೆ ಹಾಡು ಹಾಡು ತುಂಬಿದ ನಾಡ...
ಮೂಲ: ಅರವಿಂದ ಗುಹಾ ಹಿಂದೊಮ್ಮೆ ಒಬ್ಬ ಬೆಲೆವೆಣ್ಣನ್ನು ಕೂಡಿದೆ ಎರಡೂವರೆ ರೂಪಾಯಿ ಕೊಟ್ಟು, ಕತ್ತಲ ಓಣಿಯಲ್ಲಿ ಪಡೆದೆ, ಲೆಕ್ಕಾಚಾರದ ಪ್ರೀತಿ ಕೊಟ್ಟ ಹಣಕ್ಕೆ ತಕ್ಕಷ್ಟು; ನೆನಪಿಸಿಕೊಳ್ಳಲು ಅವಳ ಎಷ್ಟೋ ಯತ್ನಿಸುತ್ತೇನೆ ಸ್ಮೃತಿಯ ತಳದಾಳಕ್ಕೇ ಜಾರಿ...
ನನ್ನಾಕೆ ಇವಳು ತಾ ಬಲು ಬಿಂಕದಾಕೆಯೆನೆ ಒಮ್ಮೆ ಬಿಮ್ಮನೆ ಬಿಗಿದು ನಿಲ್ಲುವಳು. ನೂರು ಸಲ ಮಾತನಾಡಿಸಲೇನು? ಸುಮ್ಮನಿರುವಳು, ಕಮಲ ಸುರಭಿಯನು ಹೊರದೂಡುವಂದದಲಿ, ‘ಸುಮ್ಮಾನೆ! ಇಂತೇಕೆ, ಮಾನಿನಿಯು?’ ಎಂದು ಕೆಣಕಲು ತಾನೆ ಸಲಿಲಮಯವಾಗುವದು ನೇತ್ರ. ನಲ್...
(ಕೋಲು ಕುಣಿತ) ಬಾರೆ ಸಖೀ ಚಂದ್ರ ಮುಖಿ ಕೋಲು ಕುಣಿಯುವಾ ಗೆಜ್ಜೆ ಹೆಜ್ಜೆ ಘಿಲ್ಲ ಘಿಲಕ ಗುರುವ ನೆನೆಯುವಾ ಠಪ್ಪ ಠಪಾ ಬಣ್ಣ ಕೋಲು ಗುರುವ ಕೂಗುವಾ ಠಕ್ಕ ಠಕಾ ಕೋಲು ಕುಟ್ಟಿ ಹರನ ಕರೆಯುವಾ ಗಿರ್ರ ಗಿರಕ ಗಿರಕಿ ಹಾಕಿ ಗುರುವ ಕಾಲುವಾ ಕೂಗಿ ಕುಣಿದು ಕ...
ಸಾವರ್ ಜನಕೆ ಸಾವರ್ ದೇವ್ರು ! ಬಡವನ ದೇವ್ರು ವೊಟ್ಟೆ ! ದುಡ್ಡಿನ್ ಡಬ್ಬಿ ! ಯೋಳಾದ್ ಕೇಳು ! ಸತ್ಯಕ್ ನಾ ಬಾಯ್ ಕೊಟ್ಟೆ ! ೧ ತಿನ್ನದ್ ಕಲ್ಲಿನ್ ದೇವರ್ ಮುಂದೆ ತಿಂಡಿ ತುಂಬಿದ ತಟ್ಟೆ ! ಕಾಲಿ ತಿಂದು ಕಾಲಿ ತಿಂದು ಕೆರಳುರಳೈತೆ ವೊಟ್ಟೆ ! ೨ ಬಡವ...
ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...
ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ ಬೆಳೆಯಲಾರದಾ ಹಣವು ಬದುಕಿಂದ ಮೇಲೆ – ವಿಜ್ಞಾನೇಶ್ವರಾ *****...
(ಅಡ್ಡ ಗುಣತದ ಪಡ) ತಂದನಾನೋ ತಾನನಂದ್ರನಾನಾ ತಂದನಾಽನೋ ತಾನನಾ || ೧ || ನವ್ಲ ರಾಯರ ಪಟ್ಣಕೇ ಬಂದರಿಬ್ರ ಕಲ್ಲಾರೂ ನೆವಲಂತಿ ಕರ್ ದಾರೋ ಯೆಮ್ಮೆ ದಿಂಬವಾಗೇ || ೨ || ನಾಗಪ್ಪಾ ನಾದಾಗೇ ಹೋಗಪ್ಪಾ ಗುತ್ತೀಗೇ ಬಾರಪ್ಪಾ ಶುಗ್ದೀ, ಬೆಲೆ ಮುಂದೇ ನಾಗಮಂಡ...
ಕವಿಯ ಪ್ರಥಮ ಕವನ ಮಗುವಿನ ಮೊದಲ ತೊದಲಿನಂತೆ ಗೀಚಿದ್ದೇ ಕಾವ್ಯ; ಆಡಿದ್ದೇ ಮಾತು ಅಪ್ಪು-ತಪ್ಪುಗಳೆಲ್ಲವೂ ಇಲ್ಲಿ ಒಪ್ಪು ಪುಳಕದ ಭಾವನೆ ತುಳುಕಿಸುವ ಕವನದ ಮೊದಲ ಸಾಲು ಮೊದಲ ಸಾಲಿನ ಜೊತೆ ಸಾಲು ಸಾಲಾಗಿ ತಳಕು ಹಾಕಿಕೊಂಡವದೆಷ್ಟೋ ಸಾಲು ನವ ಜನಿತ ಕವಿ...













