ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು;
ಫಲ ಏನೊ ? ಬಳೆಯುತಿದೆ ಬಯಲ ಬಸಿರು.
ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು,
ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು.
ಗಾಳ ಗೋಳಿಡುವಂತೆ ಭೋರಾಡುತಿಹುದು;
ಬಾಳುವೆಯೆ ಹೊಸದೊಂದು ಒಗಟವಾಗಿಹುದು.
ನೆಲೆಯರಿಯದೇ, ತೂಗು ಜೋಕಾಲಿಯಾಗಿ
ತಲೆ ತಿರುಗಿಸುವದೊಮ್ಮೆ, ಕೆಳಗೆ ಮೇಲಾಗಿ
ತೂಗಿ ತಲೆದೂಗುವುದು ತಲ್ಲೀನವಾಗಿ
ಬೇಗನೆ ಮತ್ತೆ ಹಾಲ್ಗುಡಿದ ಹಾವಾಗಿ,
ನನ್ನ ಬಾಳುವೆಯಹುದು ಶ್ರಾವಣದ ಹಗಲು;
ತನ್ನ ಹೊಯ್ದಾಟದಲಿ ಅದಕಿಂತ ಮಿಗಿಲು.
*****