(ಕೋಲು ಕುಣಿತ)
ಬಾರೆ ಸಖೀ ಚಂದ್ರ ಮುಖಿ
ಕೋಲು ಕುಣಿಯುವಾ
ಗೆಜ್ಜೆ ಹೆಜ್ಜೆ ಘಿಲ್ಲ ಘಿಲಕ
ಗುರುವ ನೆನೆಯುವಾ
ಠಪ್ಪ ಠಪಾ ಬಣ್ಣ ಕೋಲು
ಗುರುವ ಕೂಗುವಾ
ಠಕ್ಕ ಠಕಾ ಕೋಲು ಕುಟ್ಟಿ
ಹರನ ಕರೆಯುವಾ
ಗಿರ್ರ ಗಿರಕ ಗಿರಕಿ ಹಾಕಿ
ಗುರುವ ಕಾಲುವಾ
ಕೂಗಿ ಕುಣಿದು ಕೇಕೆ ಹಾಕಿ
ಶಿವನ ಸೇರುವಾ
ಗುಡುಗು ಮೆಟ್ಟಿ ಸಿಡಿಲು ಅಟ್ಟಿ
ಕುಟ್ಟಿ ಕುಣಿಯುವಾ
ಅರುಹು ಗಟ್ಟಿ ಮರಹು ಕಟ್ಟಿ
ಲಿ೦ಗವಾಗುವಾ
ನಾವೆ ಶಕ್ತಿ ಬ್ಯಾಡ ಯುಕ್ತಿ
ಧರ್ಮ ಬೆಳಗುವಾ
ವೀರಶೈವ ವಿಶ್ವಧರ್ಮ
ಸತ್ಯ ಸಾರುವಾ
*****
















