ಕಾತರಿಸುತ್ತಿದೆ ಮನವು ಪ್ರಭುವಿಗಾಗಿ
ಜೀವನವು ಈಗ ಶೂನ್ಯವಾಗಿದೆ
ಬದುಕಿನ ಬಿಂದು ಬಿಂದುವಿನಲಿ
ಸತ್ಯವು ಇಣಕಿ ಧನ್ಯವಾಗಿದೆ

ಇನ್ನೇನು ಈ ಬಾಳು ಭ್ರಮೆಯಲ್ಲವೆ!
ಭ್ರಮೆ ನಿನಗೆ ಸುಖ ನೀಡುವುದೆಲ್ಲ!
ಆನಂದವೇ ಮರಿಚಿಕೆಯಾಗಿ ಕಾಡಿದೆ
ಚೈತನ್ಯ ಹೊರತು ಏನು ಬೇಡುವುದೊ!

ಕಂಗಳ ಕಂಬನಿಗೆ ಅಂತ್ಯವಿಲ್ಲ
ಪ್ರಭುವಿನ ದರುಶನಕ್ಕೆ ವ್ಯಾಕುಲತೆ
ಏನು ಪಡೆದರೇನು ಈ ಬಾಳಿನಲಿ
ಮಾಯವಾಗದು ಮನದ ಚಂಚಲತೆ

ಮೌನದಿ ದೇವಗೆ ನಾ ಆರಾಧಿಸಬೇಕು
ನನ್ನ ಬದುಕು ಅವಗೆ ಮುಡಿಪಾಗಬೇಕು
ಕ್ಷಣದ ಬಾಳಿಗೆ ನಾನಿನ್ನು ಸಿಂಗರಿಸಲಾರೆ
ಎನ್ನ ಅಂತರಂಗಕ್ಕೆ ಸತ್ಯಬೇಕು

ಕಾಣುವ ಈ ಬಣ್ಣದ ಕನಸುಗಳೇಕೆ!
ನನ್ನ ಪ್ರಪಾತಕ್ಕೆ ನೂಕುವ ಮನಸುಗಳೇಕೆ
ಭಾವದಲೋಕದಲಿನಾ ತೇಲಬೇಕು
ಮಾಣಿಕ್ಯ ವಿಠಲನಲಿ ಈಜಾಡಬೇಕು
*****