ಬರೆದವರು: Thomas Hardy / Tess of the d’Urbervilles
ಮಲ್ಲಿಯು ಗಾಂಧಿಯವರ ದರ್ಶನಮಾಡಿಕೊಂಡು ಬಂದಳು ಅವರು ದರಿದ್ರ ನಾರಾಯಣನ ಪ್ರತಿನಿಧಿಯೆಂದು ಮೊಳಕಾಲುಮೇಲಕ್ಕೆ ಪಂಚೆಯುಟ್ಟು ಅರೆಮೈ ಮುಚ್ಚುವಷ್ಟು ಬಟ್ಟೆಯುಟ್ಟು ಹಗಲೂ ರಾತ್ರಿ ರಾಮ ರಾಮ ಎನ್ನುತ್ತ ಕುಳಿತಿರುವುದು ಅವಳ ಮನಸ್ಸಿಗೆ ಬಹಳ ಹಿಡಿಯಿತು. ಹಿಂದಿನ ಕಾಲದ ಯಾವನೋ ಜ್ಞಾನಿಯೊಬ್ಬನು ಭರತಖಂಡದ ದಾಸ್ಯವಿಮೋಚನಕ್ಕಾಗಿ ಮತ್ತೆ ಅವತರಿಸಿಬಂದಿರುವ ನೆಂದು ಅವಳಿಗೆ ತೋರಿತು. ಆ ಆಶ್ರಮದ ಜೀವನ ಅವಳಿಗೆ ಬಹಳ ಮೆಚ್ಚುಗೆಯಾಯಿತು.
ಅವಳು ಇಂಗ್ಲಿಷ್ ಓದಿದವಳು. ಬ್ರಿಟಿಷರು ಎಂತಹ ಕಪಿ ಮುಷ್ಟಿಗಳು ಎಂಬುದನ್ನು ಬಲ್ಲಳು. ಗಾಂಧಿಯವರು ನಿರಸ್ತ್ರರು. ಸುಲಭ ಜೀವನರು. ಇನ್ನೊಬ್ಬರಿಗೆ ಹಿಂಸೆಯನ್ನು ಮಾಡದವರು. ಸತ್ಯಸಂಪನ್ನರು. ಇವರೆಂತು ಸಶಸ್ತ್ರರಾದ, ಸಮ್ರಾಟ್ ಪದಸ್ಥಿತರನ್ನು ಎದುರಿಸುವರು? ಎಂದು ಅವಳಿಗೆ ಭಾರಿ ಯೋಚನೆ.
ಅವಳ ಮನಸ್ಸು ಇದು ಸಾಧ್ಯವೇ ಎಂದು ಪುರಾಣ ಇತಿಹಾಸ ಗಳನ್ನು ಹುಡುಕಿತು. ” ಸಾಮ್ರಾಜ್ಯಗಳು ಹಿಂದೆ ಎಷ್ಟೋ ಆಗಿವೆ. ಆದ ಸಾಮ್ರಾಜ್ಯಗಳಲ್ಲಿ ಯಾವುದೂ ಇಲ್ಲ ಅನ್ಯಾಯವಾಗಿದ್ದವು ಹೋದುವು ಎಂದರೆ ನ್ಯಾಯವಾಗಿದ್ದವೂ ಹೋಗಿವೆ. ಹಾಗಾದರೆ ಜಗತ್ತಿನಲ್ಲಿ ಎಲ್ಲವೂ ನ್ಯಾಯ ಅನ್ಯಾಯ ಎಂಬ ಹಂಗಿಲ್ಲದೆ ಹಾಳಾಗ ಬೇಕೇನು? ಯಾವುದೂ ಶಾಶ್ವತವಲ್ಲ ಎಂಬುದೊಂದೇ ನಿಜವೇನು? ಅದೇ ಸಿದ್ದಾಂತವೇನು ? ಎದುರಿಗಿರುವ ಹೊಳೆಯನೀರು ಗಲಗಲ ಎಂದು. ಸದ್ದುಮಾಡುತ್ತ ಹೊರಟುಹೋಗುತ್ತಿದೆ. ಹಾಗೆಯೇ ಕಳೆದುಹೋಗು ತ್ರಿರುವ ಕಾಲದೊಡನೆ ನಮ್ಮ ಆಯಸ್ಸೂ ಕಳೆಯುತ್ತಿದೆ. ಅದರಂತೆಯೇ ಪ್ರತಿಯೊಂದಕ್ಕೂ ಆಯಸ್ಸೂ ಜಾರುತ್ತಿದೆ: ಹೌದೇನು? ಹಾಗಾದರೆ ಬೆಟ್ಟವೂ ಒಂದು ದಿನಸ ಪುಡಿಪುಡಿಯಾಗುವುದೇನು ? ಆಗುತ್ತಿಲ್ಲವೇನು? ಗಾಳಿ, ಮಳೆ ಬಿಸಿಲು ಇವೆಲ್ಲವೂ ಕಲ್ಲು ಬಂಡೆಗಳಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿವೆ. ಎಲ್ಲವೂ ಸವೆದುಹೋಗುತ್ತಿವೆ. ಸವೆದು ಸಣ್ಣವಾಗಿ ಕೊನೆಗೆ ಇಲ್ಲವಾಗುತ್ತಿವೆ. ಹಾಗೆಯೇ ಬ್ರಿಟಿಷ್ ಸಾಮ್ರಾಜ್ಯವೂ ಸವೆಯುತ್ತಿದೆಯೇ ? ಸಣ್ಣವಾಗುತ್ತಿದೆಯೇ? ಸಾಯು ತ್ತಿದೆಯೇ ?
“ಅದು ಏನೂ ಕಾಣಿಸದಲ್ಲ? ಹೇಗಾಗುತ್ತದೆ? ಭಾರತಿಯನ್ನು ಕಚ್ಚಿರುವ ದಾಸ್ಯಶ್ಯಂಖಲೆ ಮುರಿಯುವುದೇ? ಸಂಕಲೆ ಕಳಚುವುದೇ? ಅಯ್ಯೋ! ಪುರಾತನ ವೈಭವಸಂಪನ್ನಳಾದ ಮಹಾದೇವಿಯಿಂದು ಬ್ರಿಟಿಷ್ ಸಿಂಹದ ಕಬಳವಾಗಿ ಮೂದೇವಿಯಾಗಿರುವಳಲ್ಲ!’
ಮಲ್ಲಿಗೆ ಅಳು ಬಂತು : ಅತ್ತಳು.
ಮತ್ತೆ ಯೋಚನೆ ಬಂತು: ‘ ಗಾಂಧಿಯವರು ಥೈರ್ಯವಾಗಿದ್ದಾರೆ. ಅಳುವುದಿಲ್ಲ: ನಮ್ಮ ಜನ ಒಂದಾದರೆ ಬ್ರಿಟಿಷರು ಬಿಟ್ಟೋಡುವರು ಎನ್ನುತ್ತಾರೆ. ಒಂದು ವರ್ಷದಲ್ಲಿ ಸಾಮ್ರಾಜ್ಯ ಹೋಗಿ ಸ್ಟಾರಾಜ ಬರುವುದು ಎನ್ನುತ್ತಾರೆ. ಅವರು ಮಾಡಿದ ಕೆಲಸವೆಲ್ಲ ಮರಳಿನ ಮನೆಯ ಹಾಗೆ ಕುಸಿಯುತ್ತಿದೆ. ಹಿಂದೂ ಮುಸಲ್ಮಾನರ ಐಕ್ಯ ವೆಂದರು. ಜೊತೆಜೊತೆಯಲ್ಲಿ ದುಡಿದವರು ಇಂದು ಬಿಟ್ಟು ಬೇರೆ ಯಾಗಿದ್ದಾರಲ್ಲ? ಗಾಂಧಿಯವರು ರೈಲಿನ ಹಾಗೇನು? ಬಂದವರು ಬನ್ನಿ! ಹೋದವರುಹೋಗಿ. ನಾನಂತೂ ಸ್ವರಾಜ್ಯ ಬರುವವರೆಗೂ ಬಿಡುವುದಿಲ್ಲ ಎಂದಿರುವುದರ ಅರ್ಥ ಅದೇ ಏನು?’
‘ ನಮ್ಮ ಪುರಾಣಗಳಲ್ಲಿ ಏನೋ ಇಂತಹ ಪವಾಡಗಳು ಆಗಿವೆ. ಪರಶುರಾಮನು ವೀರಕ್ಷತ್ರಿಯರನ್ನು ಇಪ್ಪತ್ತೊಂದುಸಲ ಮಾರಣ ಹೋಮ ಮಾಡಿದ್ದಾನೆ. ಆದಕ್ಕೆ, ಅವನ ಕೈಯಲ್ಲಿ ಗಂಡುಗೊಡಲಿ ಯಿತ್ತು. ಇವರ ಕೈಯಲ್ಲಿ ಹತ್ತಿ, ರಾಟಿ, ಹೌದು ನಿರಸ್ತ್ರನಾದ ಅಗಸ್ತ್ಯರು ವಿಂಧ್ಯಪರ್ವತವನ್ನು ಮಲಗಿಸಿದರು: ಸಮುದ್ರವನ್ನು ಕುಡಿದರು. ಹಾಗೆಯೇ ಈತನೂ ಮಾಡುವನೋ? ಬ್ರಿಟಿಷ್ ಸಾಮ್ರಾಜ್ಯವೆಂಬ ಕಡಲನ್ನು ಕುಡಿದು ಅದನ್ನು ನಿರ್ನಾಮಮಾಡು ವನೋ? ಸೂರ್ಯನನ್ನು ಅಡ್ಡಗಟ್ಟುವಷ್ಟುಮಟ್ಟಿಗೆ ಬೆಳೆದ ವಿಂಧ್ಯ ಪರ್ವತವನ್ನು ಅಗಸ್ತ್ಯರು ಮಲಗಿಸಿದಂತೆ, ಈ ತಪಸ್ವಿಯು ಮಹಾ ಬಲಶಾಲಿಯಾದ ಬ್ರಿಟಿಷ್ ಸಿಂಹವನ್ನು ಗೆಲ್ಲುವನೋ?’ ಎಂದು ಎಷ್ಟೆಷ್ಟೋ ಯೋಚನೆಗಳು ಬಂದುವು. ಮಲ್ಲಿಯು ಅದೆನ್ನೆಲ್ಲಾ ಒಂದೇ ಮಾತಿನಲ್ಲಿ ಉಪಸಂಹಾರ ಮಾಡಿದಳು. ಯುಗಯುಗಾಂತರಗಳಿಂದ ಜನಾಂಗದ ಹೃದಯದಲ್ಲಿ ವಜ್ರವನ್ನು ಹಾಕಿ ಅಗಿಸಿದಂತೆ, ಕುಂದಣದಲ್ಲಿ ಕೆತ್ತಿದಂತೆ, ಬೆರೆತುಹೋಗಿರುವ ರಾಮಧ್ಯಾನವನ್ನು ಆತನ ಬಾಯಿಂದ ಕೇಳಿದಮೇಲೆ ಅವಳಿಗೆ ಆತನ ವಿಜಯದಲ್ಲಿ ಎಳ್ಳಷ್ಟೂ ಸಂಶಯವುಳಿಯಲಿಲ್ಲ.
ಮಲ್ಲಿ ಅಲ್ಲಿಂದ ಬಂದಮೇಲೆ ಅವಳಲ್ಲಿ ಅಪಾರವಾದ ಬದಲಾವ ಗಳಾಗಿಹೋಗಿವೆ. ನಾಯಕನ ಶೃಂಗಾರವನ್ನು ಸಹಿಸಿ, ಸಹನೆಯಿಂದ ಸಹಕರಿಸುವದು ಪತಿದೇವನ ಪೂಜೆಯೆಂದು. ದಿನದಿನವೂ ತಾನು ಖಾದಿ ಉಡುವ ಬದಲು ರೇಶಿಮೆಯ ಕೈಮಗ್ಗದ ಸೀರೆ ಉಡುತ್ತಿರುವುದು ರಾಣಿಯ ಮನಸ್ಸಿನ ತೃಪ್ತಿಗಾಗಿ. ನಾಯಕನು ರಾಣಿಯೂ, ತಿಂಗಳು. ಎರಡು ತಿಂಗಳಿಗೆ ಜವಳಿ ಅಂಗಡಿಗೆ ಹೋಗುವುದು ವಾಡಿಕೆ. ಹೋದಾಗ ಒಂದಾದರೂ ಕಲಾಪತ್ತು ಸೀರೆ ಇವಳಿಗೆಂದು ತರಬೇಕು. ಈಗ ಮಲ್ಲಿ ತಿಂಗಳು ತಿಂಗಳಿಗೆ ತನ್ನ ತಾಯಿ ಸತ್ತ ದಿವಸ ಎಂದು ಎಂಟು ಹತ್ತು ಸಾಮಾನ್ಯ ಸೀರೆಗಳನ್ನು ತರಿಸಿ ಬಡವರಿಗೆ ಕೊಡುತ್ತಾಳೆ. ಹುಣ್ಣಿಮೆಯ ದಿನ ತಪ್ಪದೆ ಸತ್ಯನಾರಾಯಣ ಪೂಜೆಮಾಡಿ, ರಾಣಿಗೆ ಗಂಡು ಮಗುವಾಗಲೆಂದು ಹರಕೆ ಕಟ್ಟಿ ಗಂಡನ ಕೈಯ್ಯಿಂದ ಗಂಡು ಮಕ್ಕಳಿಗೆ ರಾಣಿಯ ಕೈಯಿಂದ ಹೆಣ್ಣು ಮಕ್ಕಳಿಗೆ ವಸ್ಮದಾನ ಮಾಡಿ ಸುತ್ತಾಳೆ. ಆ ದಾನದಲ್ಲಿ ಅವಳದು ಒಂದೇ ಹಟ. ಪರದೇಶೀ ಬಟ್ಟೆ ಕೂಡದು. ನಾಯಕನು ತನ್ನ ಖರ್ಚಿಗೆಂದು ಕೊಡುವ ಒಂದು ಸಾವಿರ ರೂಪಾಯಿಯಲ್ಲಿ ಗಾಂಧಿಯವರ ಹೆಸರಲ್ಲಿ ಸುಮಾರು ಐನೂರು ರೂಪಾಯಿ ಪಂಚಮರಿಗೆ ದಾನವಾಗುತ್ತದೆ. ಆಗಾಗ ಹೋಗಿ ಆಸ್ಪತ್ರೆ ಗಳಲ್ಲಿ ಹಣ್ಣು ಹೂವು ಔಷದದ ಖರ್ಚುಗಳನ್ನು ಕೊಟ್ಟು ಬರುತ್ತಾಳೆ. ಎಲ್ಲದಕ್ಕಿಂತಲೂ ಒಂದರಲ್ಲಿ ಆದ ಒದಲಾವಣೆ ಮಾತ್ರ ನಾಯಕನಿಗೂ ಇಷ್ಟವಿಲ್ಲ: ರಾಣಿಗಂತೂ ಒಪ್ಪಿಗೆಯೇ ಇಲ್ಲ: ಅದು ಮಾಂಸ ಭೋಜನ: ಅವಳು ಶುದ್ಧವಾಗಿ ಮಾಂಸನನ್ನು ಬಿಟ್ಟಿದ್ದಾಳೆ. ಮಾಂಸವನ್ನು ಬಿಟ್ಟುದು ಮಾತ್ರವಲ್ಲ : ಅದರ ಸಂಪರ್ಕವೇ ಇಲ್ಲದಂತೆ, ತಾನೇ ಈಗ ಬೇರ ಅಡುಗೆ ಮಾಡಿಸುತ್ತಾಳೆ. ಹಾಲು, ಹಣ್ಣು, ಮದ್ಯ, ಯಥೇಚ್ಛವಾಗಿ ಸೇವಿಸುತ್ತಿದ್ದವಳು ಇಂದು ಹಾಲು ಹಣ್ಣು ಬಿಟ್ಟು ಹೆಚ್ಚಾಗಿ ಕರಿದ ತಿಂಡಿಯನ್ನೂ ತಿನ್ನುವುದಿಲ್ಲ.
ನಾಯಕನು ಎಷ್ಟೋಸಲ “ಮಲ್ಲೀಗೆ ದೆವ್ವ ಹಿಡೀತು.” ಎಂದರೆ ಮಲ್ಲಿ “ಬುದ್ದಿಯವರ ಮಾತು ಸಟೆಯಲ್ಲ. ಆದರೆ ಆ ದೆವ್ವದ ಹೆಸರು ಗಾಂಧಿ ಎನ್ನುತ್ತಾಳೆ. ರಾಣಿ “ನಮ್ಮ ಮಲ್ಲಮ್ಮ ಬೈರಾಗಿ ಯಾಗತಾಳೇನೋ ?” ಅಂದರೆ “ಹೌದು ಬುದ್ಧಿ, ತಮ್ಮ ಮಗನ್ನ ಎತ್ತಿಕೊಂಡು ಮುದ್ದಾಡಿ, ನಮ್ಮ ವಂಶದ ಬೆಳಕು ಅವನಲ್ಲಿ ಕಂಡ ಮೇಲೆ ” ಎನ್ನುತ್ತಾಳೆ
ಈಗ ಮಲ್ಲಿಗೆ ಆನಂದಮ್ಮನ ಜೊತೆ ಹೆಚ್ಚು ಬೇಕಾಗಿದೆ. ಗಂಡನು ಮನೆಯಲ್ಲಿದ್ದಾಗ ಆತನ ಜೊತೆ, ಹೊರಗಿನವರು ಎಂದರೆ ನರಸಿಂಹಯ್ಯ – ಆತನು ದಿನವೂ ಬರುತ್ತಾನೆ. ಆತನ ಜೊತೆಯಲ್ಲಿ ಗಂಡಹೆಂಡಿರೂ ಇಬ್ಬರೂ ಹರಟೆ ಹೊಡೆಯುತ್ತ ಕುಳ್ಳಿರುತ್ತಾರೆ – ದಿನವೂ ಒಂದು ಗಂಟೆಯ ಹೊತ್ತು ಭಗವದ್ಗೀತೆ. ಒಂದು ಅರ್ಧ ಗಂಟೆಯ ಹೊತ್ತು ಲೋಕಾಭಿರಾಮದ ಮಾತುಗಳು ಉಳಿದ ಅರ್ಧ ಗಂಟೆ ಗಾಂಧಿಯವರ ವಿಚಾರ.
ನರಸಿಂಹಯ್ಯ ಈಗ ಮನೆಯವರಲ್ಲಿ ಒಬ್ಬ. ಆತನಂತೂ ಹುಚ್ಚಾಗಿ ಹೋಗಿದ್ದಾನೆ. ಈಗ ಒಂದು ದಟ್ಟಿ ಒಂದು ಜುಬ್ಬಾ, ಮೈಮೇಲೊಂದು ಚೌಕ, ಶುಭ್ರವಾಗಿರುವ ಆ ಬಟ್ಟೆಗಳಲ್ಲಿ ಏನೋ ಒಂದು ರಮ್ಯತೆಯಿದೆ. ಸೌಮ್ಯತೆಯಿದೆ. ಶಾಂತಿಯಿದೆ. ಆತನ ಮುಖದ ವರ್ಚಸ್ಸೂ ಬದಲಾಯಿಸಿದೆ. ಮಲ್ಲಿಯಂತೂ ಮೊದಲಿನಿಂದ ಆತನ ಭಕ್ತಳು. ಅವಳು ಇರಲಿ. ರಾಣಿಯಂತೂ ಮಲ್ಲಿಗಿಂತ ಭಕ್ತ ಳಾಗಿದ್ದಾಳೆ. ‘ಅವರು ಬಿಡಿ ಬುದ್ಧಿ. ಛೋಟಾ ಗಾಂಧಿಯಾಗಿದ್ದಾರೆ. ಒಳ್ಳೆ ತಾಯಿ ಹೆತ್ತ ಮಗ. ಅವರು ಕೂತುಕೊಳ್ಳೋ ಸೋಫಾದಲ್ಲಿ ಇನ್ನು ಯಾರಾದರೂ ಕೂತರೆ ನಮಗೆ ಕೋಪ ಬರುತ್ತದೆ? ಎನ್ನುತ್ತಾಳೆ.y
ನಾಯಕನೂ ತನಗೆ ಶಿಳಿಯದಂತೆಯೇ ಬದಲಾವಣೆಯಾಗು ತ್ತಿದ್ದಾನೆ. ಮೊದಲಿನ ಹಾಗೆ ಸೂಟು ಹಾಕುವುದು ಅಪರೂಪವಾಗು ತ್ತಿದೆ ನಾಲ್ಕು ಬೆರಳಿನ ಕಲಾಪತ್ತಿನ ಅಂಚಿನ ಪಂಜೆ ಉಡುತ್ತಿದ್ದ ವನು, ಈಗ ಯಾವುದಾದರೇನು ಮಹಾ ! ಎನ್ನುತ್ತಾನೆ. ಮನೆಯಿಂದ ಹೊರಗೆಯೂ ಯಾರಾದರೂ ಗಾಂಧಿಯವರ ವಿಚಾರದಲ್ಲಿ ಸಣ್ಣ ಮಾತು ಆಡಿದರೆ ರೇಗಿಬೀಳುತ್ತಾನೆ.
ಒಂದು ದಿನ ಕ್ಲಬ್ಬಿನಲ್ಲಿ ಯಾರೋ ಬ್ರಿಟಿಷರ ಸೂಪರ್ ಭಕ್ತರು ಗಾಂಧಿಯನ್ನು “ಅರೆಬೆತ್ತಲೆ ಫಕೀರ” ಎಂದರು. ನಾಯಕನು ಇಸ್ಪೀಟ್ ಆಡುತ್ತಿದ್ದವನು ಎದ್ದು ಕೈಯಲ್ಲಿದ್ದ ಇಸ್ಪೀಟ್ ಹರಿದು ಅವನ ತಲೆಯ ಮೇಲೆ ಹಾಕಿ “ಎಚರಿಕೆ, ಮಿಕ್ಕ ದೇಶಗಳಲ್ಲಿ ಫಕೀರರು ಭಿಕಾರಿಗಳು. ಇಂಡಿಯದಲ್ಲಿ ಕಿರೀಟಧಾರಿಗಳು ಫಕೀರರ ಗುಲಾಮರು. ತಿಲಕ್ ಫಂಡಿಗಾಗಿ ಕೋಟಿ ರೂಪಾಯಿ ಕೇಳಿದ ಕೂಡಲೇ ದೇಶ ಕೊಟ್ಟಿತು. ಅಂಥವನು ಫಕೀರ! ಅವನಿಗೆ ಇಲ್ಲ. ನಿನುಗೆ ಇದೆ. ನಿಮ್ಮಂಥವರು ಸಾವಿರ ಜನರನ್ನು ಮೇಯಿಸುವ ಯೋಗ್ಯತೆಯಿದೆ ಆತನಿಗೆ. ವೈರಾಗ್ಯಶೇಖರನಾದ ಪರಮೇಶ್ವರ ಬೂದಿ ಬೊಳೆದುಕೊಂಡ್ಕು ಚರ್ಮತೊಟ್ಟು, ಸ್ಮಶಾನದಲ್ಲಿ ಇರುವಹಾಗೆ ಆತ ಎಲ್ಲ ಬೇಡವೆಂದು ಕೊಂಡಿದ್ದಾನೆ. ನಿಮ್ಮ ಹಾಗೆ ಬ್ರಿಟಿಷರ ಬೂಡ್ಸ್ ಕಾಲು ತೊಳೆದು ಆತ ಬದುಕಬೇಕಾಗಿಲ್ಲ. ಈಗಲೂ ಆತನು ಕಾಂಗ್ರೆಸ್ ಬಿಡುವನೆಂದರೆ, ಉಗ್ರವಾದವನ್ನು ಬಿಟ್ಟು ಸೌಮ್ಯನಾದರೆ, ಬ್ರಿಟಷ್ ಸರಕಾರ ಆತನಿಗೆ ತಿಂಗಳಿಗೊಂದುಸಾವಿರ ಪೌಂಡ್ ಕೊಟ್ಟೀತು ಮರಿಯಬೇಡಿ ಸರ್! ಆತನೂ ಕೈಸರ್ ಇ ಹಿಂದ್ ಮೆಡಲ್ ತೆಗೆದುಕೊಂಡು ಇದ್ದವನು. ನಿಮ್ಮಹಾಗೆ ಹೊಟ್ಟೆಗಿಲ್ಲದೆ ನೌಕರಿ ಹಿಡಿದವನಲ್ಲ ಎಂದು ಝಾಡಿಸಿ ಬಿಟ್ಟ. ಅಷ್ಟೇ ಅಲ್ಲ. ಕ್ಲಬ್ಬಿನ ಸೆಕ್ರೆಟಿರಿಯನ್ನು ಕರೆದು “ಇವರು ಅಪಾಲಜಿ ಕೊಡಬೇಕು. ಇನ್ನು ಮುಂದೆ ಈ ಕ್ಲಬ್ಬಿನ ವಾತಾವರಣ ದಲ್ಲಿ ಆ ಮಹಾತ್ಮರನ್ನು ಯಾರೂ ಕೀಳು ನುಡಿಯಕೊಡದು. ಹಾಗೆಂದು ನೀವು ನನಗೆ ಭರವಸೆ ಕೊಟ್ಟರೆ ನಾನು ಮೆಂಬರಾಗಿರುತ್ತೇನೆ. ಇಲ್ಲ ದಿದ್ದರೆ ಇದೋ ಹೊರಟೆ, ನೀವು ಜನರಲ್ ಬಾಡಿ ಮೀಟಿಂಗ್ ಕರೆದು ಇದನ್ನು ಗೊತ್ತುಮಾಡಿ” ಎಂಡು ಹೊರಟೇಬಿಟ್ಟನು.
ದಾರಿಯಲ್ಲಿ ಕಾರಿನಲ್ಲಿ ಬರುತ್ತಾ, “ಅವನಂದದ್ದೂ ಒಳ್ಳೆಯದೇ ಆಯಿತು. ಅವನು ಅಪೂಲಜಿ ಕೊಟ್ಟರೆ ಅವನಿಗೆ ಒಂದು ನೂರು ರೂಪಾಯಿನ ಸೂಟ್ ಕೊಡೋದು. ಅದೆಲ್ಲ ಇರಲಿ. ಮಲ್ಲಿ ನರಸಿಂಹಯ್ಯ ಇದನ್ನು ಕೇಳಿದರೆ ಎಷ್ಟು ಸಂತೋಷಪಟ್ಟು ಕೊಂಡಾರೋ ! ಆದರೆ ನಾನು ಹೇಳಬಾರದು.” ಎಂದುಕೊಂಡನು.
ಮನೆಯಲ್ಲಿ ಮಲ್ಲಿಯ ಮುಂದೆ ಹೇಳದಿರಲು ಸಾಧ್ಯವಾಗಲಿಲ್ಲ. ಮಲ್ಲಿ ಇವೊತ್ತು ಮನೆಯ ಮಹಾಲಕ್ಷ್ಮಿ ಮಿಕ್ಕವರೆಲ್ಲ ಅವಳ ಪ್ರಸಾದಕ್ಕಾಗಿ ಅವಳನ್ನು ಪ್ರದಕ್ಷಿಣೆ ಮಾಡುವ ಭಕ್ತ ಸಂತತಿ.
ನಾಯಕನು ಕ್ಲಬ್ಬಿನ ಸಂಗತಿಯನ್ನು ಹೇಳಿದಾಗ ಮಲ್ಲಿ ಎದ್ದು ಬಂದು ಗಂಡನನ್ನು ತಬ್ಬಿಕೊಂಡು ಮುತ್ತಿಟ್ಟು ಬಿಟ್ಟಳು. ಅವಳ ಮನಸ್ಸು ಕೊರಕೊರನೆ ಕೊರಗಿತು. ಆ ದೇವರೇ ಇಂಥಾ ಗಂಡನನ್ನು ಬಿಟ್ಟು ಹೇಗೆ ಹೋಗಲಿ ? ಆ ಪುಣ್ಯಾತ್ಮನ ಪಾದಸೇವೆ ಬಿಟ್ಟು ಬದುಕ ಲಾರೆನಲ್ಲಾ !” ಎಂದು ಬಲುನೊಂದಿತು.
ಮರುದಿನ ನರಸಿಂಹಯ್ಯನಿಗೆ ಎಲ್ಲವೂ ಸುಲಾವಣೆಯಾಯಿತು. ಆತನು ಎಲ್ಲವನ್ನೂ ಕೇಳಿ, “ನಾಯಕರೆ, ನಾನು ನಿಮ್ಮ ಮನೆಗೆ ವಾರಿ ನಡೆದುದು ಸಾರ್ಥಕವಾಯಿತು.” ಎಂದು ಎದ್ದು ಹೋಗಿ ಕೈ ಕುಲುಕಿ ದನು. ನಾಯಕನು ಆ ಕೈ ಕುಲುಕಿನಿಂದ ತನ್ನ ಜನ್ಮ ಸಾರ್ಥಕವಾ ಯಿತು ಎಂದುಕೊಂಡನು. ಅರಿಯದೆ ಕಣ್ಣು ನೀರುಕರೆಯಿತು.
*****
ಮುಂದುವರೆಯುವುದು


















