(ಅಡ್ಡ ಗುಣತದ ಪಡ)
ತಂದನಾನೋ ತಾನನಂದ್ರನಾನಾ
ತಂದನಾಽನೋ ತಾನನಾ || ೧ ||
ನವ್ಲ ರಾಯರ ಪಟ್ಣಕೇ ಬಂದರಿಬ್ರ ಕಲ್ಲಾರೂ
ನೆವಲಂತಿ ಕರ್ ದಾರೋ ಯೆಮ್ಮೆ ದಿಂಬವಾಗೇ || ೨ ||
ನಾಗಪ್ಪಾ ನಾದಾಗೇ ಹೋಗಪ್ಪಾ ಗುತ್ತೀಗೇ
ಬಾರಪ್ಪಾ ಶುಗ್ದೀ, ಬೆಲೆ ಮುಂದೇ
ನಾಗಮಂಡಲವೇ ಗಯಸೂನೋ || ನಾಗಪ್ಪಾ
ಮಂಡಲಕೇ, ನೀರಾ ಯರೆಶೂನೋ (ಯೆರೆಶೂನೆ) || ನಾಗಪ್ಪಾ
ಹುಲ್ಲಾನಾದೆಲ್ಲೀ ಬಯವಿಲ್ಲಾ || ೩ ||
ದಾಟಿರದಕೇ ವಿಶವಿಲ್ಲಾ || ನಾಗಪ್ಪಾ
ನಾಗಮಂಡಲವೇ ಗೆಯಸೂನೋ || ೪ ||
ತಂದನಂದಾನೋ ತಾನನಂದೆ, ನಾನಾರ
ತಂದನಂದಾನೇ ತಾನನಾನಾ || ೫ ||
ಸ್ವಾಮೀ, ನೆನವೆನೋ ಬೂಮಿಗೊಂದ ನೆನಿಯೋ
ಶಿವನೇ ಶಿವನಿಂಗಾ ಶರಣೋ || ೬ ||
ತಂದನ್ನೋ ನಾನೇ ತಾನನಂದೆ ನಾನಾರ
ತಂದನ್ನೇ ತಾನೇ ತಂದನಾನಾ || ೭ ||
ಸ್ವಾಮಿ ನೆನವೆನೋ ಬೂಮಿಯ ನೆನವೆನು
ಸ್ವಾಮಿ ಶಂಕರನಾ ನೆನೆವೆನೊ|| ೮ ||
ಸ್ವಾಮಿ ಶಂಕರನಾ ನೆನದಿಟ್ಟಲಾದೀದರೆ
ಬರದೀದ ಹಾಡೇ ಬರಲಂದೋ || (ಬೋರೆದ್ದೀ) ಬಂದಾರೇ || ೯ ||
ಶಲ್ಪ ಕೋಲು ಶಮನಾ ಮಯಲಲ್ಲಿ || ಮಯ್ಲಲ್ಲೀ ಶಲ್ಲೀದಾರೆ
ಮಲ್ಲಿಗೂವೊಂದೇ ಮುಡಿಯುವೆನೂ || (ಮುಡಿಯುವೆ) ಕಲವೇರಾ ಕಲವೇರಾ || ೧೦ ||
ಹಾಡು ತಪ್ಪಿದರೇ ನಗಬೇಡಿ || (ನಗಬೇಡಿ) ಕಲಬೇರಾ
ಹಾಡೀಗೆ ಜೆನಿಯಾ ಜನವಿಲ್ಲಾ || ಬಾವಾದೀರ || ೧೧ ||
ಹಾಡು ತಪ್ಪಿದರೇ ನೆಗಬೇಡೀ || ಕಲಬೇರಾ
ಹಾಡಿಗೆ ಜೆನಿಯಾ ಮೂದಲಿಲ್ಲ || ಬಾವಾದೀರೇ
ಜೋಡಿನಾ ಜನವೇ ಬರಲಿಲ್ಲಾ || ೧೨ ||
ಇಂದನಂದಾನೋ ತಾನನಂದೆ ನಾನಾರ
ತಂದ ನಂದಾನೋ ತಾನನಾನಾ || ೧೩ ||
*****
ಹೇಳಿದವರು: ಕುಪ್ಪ ಬೇಡು ಗೌಡ, ಕಲವೇ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















