ಕನಸುಗಳು ಹೆಚ್ಚಿ ರಾತ್ರಿ ಕಪ್ಪು ಕಾಡಿಗೆ ಕಣ್ಣುಗಳಿಗೆ ಮರದಲಿ ಸದ್ದಿಲ್ಲದೇ ಅರಳುವ ಎಲೆಗಳೂ ಹಸಿರು ಸೇರಿಸುತ್ತವೆ ಅರಸುತ ಅಲೆದಾಡುವ ಹೊರಳಾಡುವ ಮೂಕಮರ್ವಕ ಹಾಸಿಗೆಯಲಿ ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು. ಹೂವು ತುಂಬಿದ ಮರದ ಅಡಿ ಹಾಸಿವೆ ಉದುರ...

ಕ್ಯಾಬೇಜು ಮಾರಲು ಕೂತ ಗಂಡಸು ಕ್ಯಾಬೇಜಿನಂತೆ ಕಾಲಿಫ್ಲವರು ಮಾರುವ ಹೆಂಗಸು ಕಾಲಿಫ್ಲವರಿನಂತೆ ಇದ್ದಾರೆಯೆ ಇಲ್ಲವೆ- ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿ ಪ್ರೇಮಿಗಳೆ ಅಲ್ಲವೆ- ಬಟಾಟೆ ಕೊಳ್ಳ...

ಅಗುಳಿ ಕಿತ್ತಿಹ ಕದಕೆ ರಕ್ಷೆ ನೀಡುವ ಧೈರ್ಯ ಎಲ್ಲಿಂದ ಬರಬಹುದು ಹೇಳು ಗೆಳೆಯ, ಕಂಡ ಕಂಡಲ್ಲೆಲ್ಲಾ ಕೊರೆದ ಕಾಂಡವ ಕಂಡೆ, ಮತ್ತೆ ಬುಡಮೇಲು ಮರದ ಸಹಿತ. ಮಾರುಮಾರಿಗೂ ಮಂದಿ ಸೇರಿಹರು ಜೋಡಿಸಲು ಮರಮುಟ್ಟು, ಒಣಸೀಳು ಸಿಗಬಹುದೇ, ಎಂದು ನೀರ ಕಾಯಿಸಿ ಬಿ...

ಟೀಚರ್‍….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗ...

ಕೆಲವು ಮುಖಗಳೆದುರಾದಾಗ ನೋಡುತ್ತಲೇ ಒಮ್ಮೆ ಮುದ್ದಿಸಿಬಿಡಬೇಕೆನ್ನಿಸಿದರೆ ಇನ್ನು ಕೆಲವು ಎದುರಾದಾಗ ಆ ಹದ್ದಿನ ಸಮೀಪದಿಂದ ಸಿದ್ದಿಲ್ಲದೆ ಕಾಲಿಗೆ ಬುದ್ಧಿ ಹೇಳಲೇಬೇಕೆನಿಸುತ್ತದೆ. *****...

ಓ ನೋಡು ಮಾನವತೆ ನೀ ಕಾಣು ದಾನವತೆ ಕಣ್ದೋರು ಕರುಣೆಯಿಂ ವಿಜಯೇಶನೆ ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ ತಾಳ ತಪ್ಪಿದೆಯಯ್ಯ ಸೂತ್ರಧರನೆ ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ ಸಾಕು ಬಿಸಿಲಿನ ಹಲಿಗೆ ಬೇಕು ಜ...

-೧- ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ ‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ! ಕುಚುಕದ ಅರೆಮರೆಗೆ ಊರ್ವಶೀವಕ್ಷ! ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ ಮಿಂಚಿ ಹೊಂಚುವ ಕಣ್ಣು, ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ ತಿನ್ನಲಿರಿಸಿದ ಹಣ್ಣು; ಒ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...