ಹಸಿವು ರೊಟ್ಟಿಗಾಗಿ ರೊಟ್ಟಿ ಹಸಿವಿಗಾಗಿ ಕಾಯುವುದು ಎಂದೂ ಒಂದೇ ಅಲ್ಲ. ಕಾಯುವಿಕೆಯ ಅಂತರ ಅರಿವಾಗಿ ಕಂದಕ ತುಂಬಿದರೆ ಸಂಗತ ತುಂಬದಿದ್ದರೆ ಅದರದರ ಪರಿಧಿಯಲೇ ಅಸ್ತಂಗತ. *****...

ಸಾಲುಗಟ್ಟಿ ಸಾಗಿದ ಇರುವೆಗಳು ಕವಿತೆ ಮೆರವಣಿಗೆ ಹೊರಟವೆ ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ ಸಿಲುಕಿ ಹೊರ ಬರಲಾರದೇ ಒದ್ದಾಡಿವೆ ಸುರಿದ ಮಳೆ ಅಂಗಳದ ಥಂಡಿ ಹರಡಿ ಹಾಸಿದ ಹನಿ ಹನಿಯ ಹೆಗ್ಗುರುತು ಗುಳಿಯಲಿ ಅವಳ ಕಣ್ಣುಳು ಏನೋ ಅರಸಿ ಬಳಲಿವೆ ಕರಿಮೋಡದ ತ...

೧ ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇ ತೆರೆದ ಬಾಗಿಲುಗಳ ಸದಾ ಸ್ವಾಗತ, ೨೪ ಗಂಟೆಗಳ ಕಾಲ ಸುಭದ್ರ ಬಾಗಿಲು ಕಾವಲುಗಾರ ಇಲ್ಲಿ ನನ್ನೂರಲ್ಲಿ. ೨ ನಮ್ಮನ್ನು ನಾವು ಕಾಯ್ದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಬಾಗಿಲು ಚಿಲಕ ಕೀಲಿಗಳೇ ನಮ್ಮನ್...

ಗಂಗ ತುಂಗ ಯಮುನಾ ಗೋದಾವರಿ ನದಿಗಳೆಲ್ಲವನ್ನು ನಾನು ಪ್ರೀತಿಸುತ್ತೇನೆ ಬಿಯಾಸ್ ನದಿಯೆ ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ನಾನು ಹಡೆದ ಧರ್‍ಮಗಳನ್ನೂ ಸಾಕಿ ಸಲಹಿದ ದೇವರುಗಳನ್ನೂ ಗೌರವಿಸಿದ್ದೇನೆ. ಸಿಖ್ ಧರ್‍ಮವೇ ಗುರುಗ್ರಂಥ ಸಾಹೇಬನೇ ನಿನಗೂ ...

ಸುತ್ತದಿರಿ ಸಂಕೋಲೆ ಅಂಗಾಂಗಗಳ ಮೇಲೆ ಹಾರಲಿ ಅವಳು ನಿಮ್ಮಂತೆ ಮುಗುದೆ. ಸ್ವಚ್ಛಂದತೆಯ ಆನಂದ ಪಡೆಯಲಿ ಬಿಡಿ ಇರಲಿ ಅವಳಿಗೂ ಕೊಂಚ ಎಡೆ ನತ್ತಿನಲಿ ಮೂಗುತಿ ಕಾಲಲ್ಲಿ ಉಂಗುರ ಖಡುಗ ಕೈಯಲ್ಲಿ ಬಳೆ ತಲೆಗೆ ಮಲ್ಲಿಗೆಯ ದಂಡೆ ತಾಲೀಮು ತಂಗಿಗೆ ಹುಟ್ಟುತ್ತಲ...

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ! ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು ಕುಳಿ...

ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ-ಆಗಲ್ಲ. ಹೊರಟು ಹೋಗಬೇಕು ಅಂದುಕೊಳ್ಳುತ್ತೇನೆ-ದಾರಿ ಸಿಗಲ್ಲ. ನನ್ನ ಕಾಲಿಗೆ ರೆಕ್ಕೆ ಇಲ್ಲ- ಆದರೆ ತಲೆಯ ತುಂಬ ಬಿಳಿಯ ಕೂದಲಿದೆ. ಸುಮ್ಮನೆ ಕುಳಿತು ಎಲೆ ಉದುರುತ್ತಿರುವುದು ನೋಡುತ್ತೇನೆ, ಇಲ್ಲವೆ ಗೋಪುರ ಹತ್...

ಏನ ಹಾಡಲಿ ಏನ ಹೇಳಲಿ ಬನವು ಬಿಸಿಲಿಗೆ ಬೆಂದಿದೆ. ಹೊತ್ತಿ ಬತ್ತಿದ ಕೆರೆಯ ಮಣ್ಣಲಿ ಹಕ್ಕಿ ಹವ್ವನೆ ಅತ್ತಿದೆ ಮುಗಿಲ ನೀಲಿಮೆ ಕೆಂಡ ಕುಲಿಮೆಯೆ ಕಾಸಿ ಕಬ್ಬಿಣ ಬಡಿದಿದೆ ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ ಮನುಜ ಲೋಕವ ಜಡಿದಿದೆ ದೇವ ದೇವಾ ಶಾಂತಿ ರೂಹ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...