ಮರೆತು ಹೋಗಬೇಕು ಅಂದುಕೊಳ್ಳುತ್ತೇನೆ-ಆಗಲ್ಲ.
ಹೊರಟು ಹೋಗಬೇಕು ಅಂದುಕೊಳ್ಳುತ್ತೇನೆ-ದಾರಿ ಸಿಗಲ್ಲ.
ನನ್ನ ಕಾಲಿಗೆ ರೆಕ್ಕೆ ಇಲ್ಲ-
ಆದರೆ ತಲೆಯ ತುಂಬ ಬಿಳಿಯ ಕೂದಲಿದೆ.
ಸುಮ್ಮನೆ ಕುಳಿತು ಎಲೆ ಉದುರುತ್ತಿರುವುದು ನೋಡುತ್ತೇನೆ,
ಇಲ್ಲವೆ
ಗೋಪುರ ಹತ್ತಿ ನಿಂತುಕೊಳ್ಳುತ್ತೇನೆ.
ಮಬ್ಬು ಬೆಳಕಿನಲ್ಲಿ ಎಂತೆಂಥಾದ್ದೋ ನೆರಳು ಚಲಿಸುತ್ತವೆ.
ನನ್ನ ಕಣ್ಣಿಗೆ ವಿಶಾಲವಾದ ದುಃಖದ ಬಯಲು ತುಂಬಿಕೊಳ್ಳುತ್ತದೆ.
*****
ಚೀನೀ ಮೂಲ: ಪೋ ಚು-ಯಿ