ಮನೆಗೆ ಎಷ್ಟೊಂದು ನೋವು.
ಇದ್ದವರು ಬಿಟ್ಟು ಹೋದಾಗ ಹೇಗಿತ್ತೋ ಹಾಗೇ ಇದೆ.
ಇದ್ದವರ ಸುಖಕ್ಕೊಗ್ಗುವಂತೆ ಆಕಾರ ಪಡೆದು
ಅವರು ಮತ್ತೆ ಬಂದಾರೋ ಎಂದು, ಬರಲಿ ಎಂದು,
ಹಾಗೇ ಉಳಿದಿದೆ.
ಅವರು ಬಾರದೆ, ಸುಖಪಡಿಸಲು ಯಾರೂ ಇಲ್ಲದೆ.
ಮನೆ,
ಸುಖಕ್ಕೆ ಗುರಿ ಇಟ್ಟ ಬಾಣ,
ದಿಕ್ಕು ತಪ್ಪಿ ಬಿದ್ದಿದೆ.
ನೋಡಿ, ಬೇಕಾದರೆ :
ಅಲ್ಲಿ ಗೋಡೆಯ ಮೇಲಿನ ಚಿತ್ರ;
ಇಲ್ಲಿ ಪಾತ್ರೆ, ಪಿಂಗಾಣಿ, ಹೂದಾನಿ;
ಅಲ್ಲಿ ಪಿಯಾನೋ ಬಳಿ ಸಂಗೀತ ಪುಸ್ತಕ;
ಒಣಗಿದ ತೋರಣ, ಮಾಸಿದ ರಂಗೋಲಿ.
*****
ಮೂಲ: ಫಿಲಿಪ್ ಲಾರ್‍ಕಿನ್