ನನ್ನ ಕಂದಾ ಹಾಲು ಕಂದಾ
ಜೇನ ಕಂದಾ ಕುಣಿ ಕುಣಿ
ತೊಡೆಯ ಮೇಲೆ ಎದೆಯ ಮೇಲೆ
ತಲೆಯ ಮೇಲೆ ಕುಣಿ ಕುಣಿ

ನೀನು ಕುಣಿದರೆ ದಣಿವು ಜಾರಿತು
ಮೈಯು ಗಮಗಮ ನಾರಿತು.
ನಿನ್ನ ಕೈ ಮೈ ಗಂಧ ಗುಡಿಯೈ
ಸುಖದ ಸಾಗರ ಸುರಿಯಿತು

ನಿನ್ನ ನಗೆಯಲಿ ನೂರು ತಡಸಲು
ಭರದಿ ಜೋಜೋ ಚಿಮ್ಮಿತು
ನಿನ್ನ ಕಣ್ಣಿನ ಕಾಂತಿ ಶಿಖರದಿ
ಸೂರ್ಯ ಚಂದ್ರರ ತೂರಿತು

ಮಾಯ ಚೆಂಡಿಯು ಹುಂಬ ಗೂಳಿಯು
ಹುಚ್ಚ ಬೋಳಿಯು ಹೋದಳು
ನಿನ್ನ ಬಗರಿಯ ಚೂಪು ಮಳೆಯಲಿ
ತಲೆಯ ಬೋಳಿಸಿಕೊಂಡಳು

ಹುಳಿಯ ಸಾರು ತಿಳಿಯ ಸಾರು
ಹಪ್ಪ ಸೆಂಡಿಗೆ ನಿನ್ನವು.
ಇಡ್ಲಿ ದೋಸೆಯು ಚಟ್ನಿ ಸಂಬರ
ಕಿಚ್ಚು ಖಿಚಡಿಯು ನಿನ್ನವು
*****