ದುಡಿದು ದುಡಿದು ಸಾಕಾಗಿದೆ ಎಲ್ಲಿ ವಿಶ್ರಮಿಸಲಿ? ನನಗೂ ಅಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಂಡ ಸೂರ್‍ಯ.

ಇದನ್ನು ಕೇಳಿಸಿಕೊಂಡ ಬೆಟ್ಟ ಹೇಳಿತು- “ನಾನು ನಿನಗೆ ಅಮ್ಮನಾಗುತ್ತೇನೆ. ಬೆಳಿಗ್ಗೆ ನನ್ನ ಮಡಿಲಲ್ಲಿ ಹುಟ್ಟಿ ಜಗದಲ್ಲಿ ಬೆಳಿಕಿನ ಆಟವನ್ನು ಆಡಿ ಸಂಜೆ ನನ್ನ ಮಡಿಲಿಗೆ ಬಂದು ವಿಶ್ರಮಿಸಿಕೋ” ಎಂದಿತು.

ಸೂರ್ಯ ಸಂತೋಷದಿಂದ ಇಂದಿಗೂ ಬೆಳಿಗ್ಗೆ ಬೆಟ್ಟದ ಮೇಲೆ ಮೂಡಿ, ಸಂಜೆಗೆ ಬೆಟ್ಟದಮ್ಮನ ಮಡಿಲಲ್ಲಿ ಮಲಗಿ ಬಿಡುತ್ತಾನೆ.
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)