ನಿನ್ನ ಇರುವಿಕೆಯೇ
ನನಗೊಂದು ಚೇತನ
ಮೋಡ ಆಕಾಶ ಗಿಡ ಮರ
ಹುಲ್ಲು ಹೂ ಇವು ಹೇಗೆ ಇರು
ತ್ತವೆಯೋ ಹಾಗೇ ನೀನೂ ಇರು
ಅವೂ ಏನೂ ಕೊಡುವುದಿಲ್ಲ
ನೀನೂ ಏನೂ ಕೊಡಬೇಡ
ಅವುಗಳಂತೆ ನೀನೂ “ಇರು”
ವುದಿದೆಯಲ್ಲಾ ಅದೇ
ನನಗೆ ದೊಡ್ಡದು.
*****