ಬಾಹ್ಯ ಸ್ವರೂವದ ವಸ್ತುಗಳಿಗೆ ಉದ್ದ ಎತ್ತರ, ತೂಕಗಳ ಮಾಪನಗಳನ್ನು ಮಾಡವುದನ್ನು ಕಂಡಿದ್ದೇವೆ. ಆದರೆ ಭಾವನಾತ್ಮಕಕ್ಕೆ ಸಂಬಂಧಿಸಿದ ಪ್ರೇಮವನ್ನು ಅಳೆಯಲು ಮನೋವಿಜ್ಞಾನಿಗಳು ಇತ್ತೀಚೆಗೆ ಒಂದು ಮಾಪನವನ್ನು ಕಂಡು ಹಿಡಿದಿದ್ದಾರೆ. ಇದನ್ನು ಕಂಡು ಹಿಡಿದ ಎರಡು ಜನ ವಿಜ್ಞಾನಿಗಳು ಅಮೇರಿಕನ್ನರು. ಗಣಿತ ಮತ್ತು ಮನಶಾಸ್ತ್ರವನ್ನು ಆಧರಿಸಿ ಈ ಮಾಪಕವನ್ನು ತಯಾರಿಸಲಾಗಿದೆ. ಶೇ.೯೪ ರಷ್ಟು ನಿಖರವಾಗಿ ಇದು ಕೆಲಸ ಮಾಡುತ್ತದೆ, ಎಂದು ಮನಸಶಾಸ್ತ್ರಜ್ಞರಾದ ಜಾನ್ ಗಾಟ್‌ಮನ್ ತಿಳಿಸುತ್ತಾರೆ.
*****