ವೃತ್ತದಲ್ಲಿ ನಿಂತು
ನಾಲ್ಕು ದಿಕ್ಕಿಗು
ಹಾದು ಹೋಗುವವರಿಗೆಲ್ಲ
ನಿಲ್ಲಿಸಿ
ಹಸ್ತ ತೋರಿಸುವ
ಪೊಲೀಸರಿಗೆ
ಯಾರೂ ಹೇಳಲಿಲ್ಲ
ಭವಿಷ್ಯ
*****