ಕಾರು ತುಂಬಾ ವೇಗವಾಗಿ ಅಂದರೆ ೬೦ಕಿಮಿಗೂ ಹೆಚ್ಚು ವೇಗವಾಗಿ ಓಡುತ್ತಿತ್ತು. ಪೋಲೀಸಿನವ ಬೆನ್ನಟ್ಟಿ ಆ ಕಾರನ್ನು ನಿಲ್ಲಿಸಿ ದ್ರೈವರ್‍ನನ್ನು ತರಾಟೆಗೆ ತೆಗೆದುಕೊಂಡರು. “ನಿಮ್ಮ ಮೇಲೆ ಅತಿವೇಗದ ಕಾರಣ ಕೇಸ್‍ಹಾಕುತ್ತಿದ್ದೇನೆ. ನಿಮ್ಮಹೆಸರು ಹೇಳಿ” ಎಂದೆನ್ನುತ್ತಾ ತನ್ನ ಡೈರಿಯನ್ನು ತೆಗೆದು ಹೆಸರು ಬರೆದುಕೊಳ್ಳಲು ಮುಂದಾದ.
‘ಹೆಸರು ತಾನೆ ನಿಮಗೆ ಬೇಕಾಗಿರೋದು? ಬರೆದುಕೊಳ್ಳಿ’ ಎಂದೆನ್ನುತ್ತಾ ತನ್ನ ಹೆಸರು ಹೀಗೆ ಹೇಳಿದ ಆ ಡ್ರೈವರ್ ಮಹಾಶಯಃ
“ಗೋಪಿ ಕುಚಮರ್ದನ ಗೋಪಾಲದಾಸ ಹುಚ್ಚಾಚಾರ್, ಕಡಲ ಮಂಡಲಗೀ ತರದಿ ಹಣಮಂತ ಎಂಕಣ್ಣ”-
ಪೋಲೀಸಿನವ ತಬ್ಬಿಬ್ಬಾಗಿ ಬೆವತು ಹೆಸರು ಬರೆದು ಕೊಳ್ಳಲಾಗದ ಸ್ಥಿತಿ ತಲುಪಿ “ನೋಡಿ, ಸುಮ್ಮನೆ ಜಾಗ ಖಾಲಿ ಮಾಡಿ ಹೊರಡಿ ಇನ್ನು ಮುಂದೆ ಇಷ್ಟೊಂದು ವೇಗವಾಗಿ ಹೋಗಬೇಡಿ.” ಎಂದು ಬಿಟ್ಟ!
***