ಬಚ್ಚಬರಿಯ ಬೆಳಗ ನೋಡಿಹೆನೆಂದು,
ಮನೆಯಾತನ ಮಂಕು ಮಾಡಿದೆ.
ಭಾವನ ಬಯಲು ಮಾಡಿದೆ.
ಕಂದನ ಕಣ್ಣು ಮುಚ್ಚಿದೆ.
ನಿಂದೆ ಕುಂದುಗಳ ಮರೆದೆ.
ಜಗದ ಹಂಗ ಹರಿದೆ.
ಜಂಗಮದ ಪಾದೋದಕ ಪ್ರಸಾದವ
ಕೊಂಡ ಕಾರಣದಿಂದ ಮಂಗಳದ
ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನೈಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಬಚ್ಚಬರಿಯ ಬೆಳಗ ನೋಡಿಹೆನೆಂದು,
ಮನೆಯಾತನ ಮಂಕು ಮಾಡಿದೆ.
ಭಾವನ ಬಯಲು ಮಾಡಿದೆ.
ಕಂದನ ಕಣ್ಣು ಮುಚ್ಚಿದೆ.
ನಿಂದೆ ಕುಂದುಗಳ ಮರೆದೆ.
ಜಗದ ಹಂಗ ಹರಿದೆ.
ಜಂಗಮದ ಪಾದೋದಕ ಪ್ರಸಾದವ
ಕೊಂಡ ಕಾರಣದಿಂದ ಮಂಗಳದ
ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನೈಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****