ಏನ ಹಾಡಲಿ ಏನ ಹೇಳಲಿ
ಬನವು ಬಿಸಿಲಿಗೆ ಬೆಂದಿದೆ.
ಹೊತ್ತಿ ಬತ್ತಿದ ಕೆರೆಯ ಮಣ್ಣಲಿ
ಹಕ್ಕಿ ಹವ್ವನೆ ಅತ್ತಿದೆ

ಮುಗಿಲ ನೀಲಿಮೆ ಕೆಂಡ ಕುಲಿಮೆಯೆ
ಕಾಸಿ ಕಬ್ಬಿಣ ಬಡಿದಿದೆ
ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ
ಮನುಜ ಲೋಕವ ಜಡಿದಿದೆ

ದೇವ ದೇವಾ ಶಾಂತಿ ರೂಹಾ
ಸಾಕು ಬೇಸಿಗೆ ತಳಮಳಾ
ಆತ್ಮ ಬೇಸಿಗೆ ಅರುಹು ಬೇಸಿಗೆ
ಸಾಕು ಮುಗ್ಧರ ಕಳವಳಾ

ಬಿಸಿಲ ಯೋಗಿಯೆ ನಿಶೆಯ ಶಿಲ್ಪಿಯೆ
ಸಾಕು ಕೆಂಡದ ಪೂಜನಂ
ಕಲಿಯ ಕಾಲಂ ಕಲ್ಪ ಕಾಲಂ
ಸಾಕು ಯುದ್ಧದ ಯೋಜನಂ
*****