ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...

ಯುಗ ಯುಗಗಳೊಂದೊಂದೆ ಕಳೆಯುತಿರೆ ಲಘುವಾಗುತಿಹುದೆಲ್ಲ ಮನುಜ ಸಾಮರ್‍ಥ್ಯ ಹೊಗೆಯುಗಿವ ಯಂತ್ರಗಳು, ಬಗೆ ಬಗೆಯ ತಂತ್ರಗಳು ಹೆಗಲ, ತೊಗಲ, ಕಂಗಳಾ ಶಕ್ತಿ ಇದಕಾಹುತಿಯು ಲಘು ಬಗೆಯ ಕಾವ್ಯವೆನ್ನದೀ ದಿನದ ಮಿತಿಯು – ವಿಜ್ಞಾನೇಶ್ವರಾ *****...

ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ ಜೀವಗಳ ಜೀವಂತ ಬೇಯಿಸುವನು. ಗಾಳಿ ಎಲ್ಲೋ ಬಂಧಿಯಾಗಿ ಸುಳಿಯದೆ ಜ...

ಮರವನೇರಿ ತುದಿಯಲ್ಲಿ ಕುಳಿತಿದೆ ಹೂವು ಪುಟ್ಟ ಹುಡುಗಿಯರೆ… ಕಣ್ಣರಳಿಸಿ ನೋಡಿ ಹೂವಾಡಗಿತ್ತಿಯರೆ… ಹೂವಿನಂದವ ನೋಡಿ ಹಿಗ್ಗಿ ಹಾಡಿ ಏ… ಹೂವೆ ಹೇಗೆ ಕಾಣುವುದೊ ಅಲ್ಲಿಂದ ಈ ಜಗತ್ತು? ನೆಲದಲ್ಲಿರುವೆ ನಾನು ನನಗೆ ಗೊತ್ತಾಗದು ಹಾಂ...

ಮಾತ್ರಿಯೋಷ್ಕಿ ಮಾಸ್ಕೋದ ಬೀದಿ ಬೀದಿಯ ಗೊಂಬೆ ಗೊಂಬೆಯೊಳಗೊಂದು ಗೊಂಬೆ ಒಂದರೊಳಗೊಂದು ಆದಷ್ಟು ಕುಬ್ಜ ಆದರೂ ಕುಲುಕಾಟ ಒಳಗೊಳಗೆ ಗೊರ್ಬಚೇವ್ನ ಗೊಂಬೆ ಅದರೊಳಗೆ ಬ್ರೇಜ್ನೇವನ ಗೊಂಬೆ ಒಳಗೆ ಕ್ರುಶ್ಚೇವನ ಗೊಂಬೆ ಮತ್ತೂ ಒಳಗೆ ಸ್ಟಾಲಿನನ ಗೊಂಬೆ ತೊಗಲುಗ...

ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ. ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ, ನನಗೋ ಅವು ಬಹು ದೂರದ ಸತ್ಯಗಳು. ಹೊಸ ಜಗತ್ತು ನನಗೆ ಕಾಣುತ್ತಿದೆ, ಬಹುಶಃ ಚಂದ್...

ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ ನೀನು ||ಪ್ರೀ|| ಬರಿದಾಗುವುದ...

ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು ಚಿಂತೆ ಮಡುನಿಂತಂತೆ ಕಣ್ಣು ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ ನಡೆದ ಮ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...