ಬಲೆ ಹಾಕಬೇಡ ಹುಡುಗ
ಆಕ್ಟೋಪಸ್ ಕೈಗಳಂತೆ
ಎಲ್ಲೆಂದರಲ್ಲಿ –
ಪ್ರೀತಿ ಅಷ್ಟೊಂದು ಹಗುರಾದುದಲ್ಲ
ಸಹನೆ ತ್ಯಾಗ ಮನುಷ್ಯತ್ವ
ತಳ್ಳಿ ಹಾಕಿದರೆ, ಚಿಲ್ಲರೆಯಾಗಿ
ನಾಲ್ಕು ಜನರ ನಾಲಿಗೆಗೆ
ಆಹಾರವಾಗುತ್ತದೆ.
*****

Latest posts by ಲತಾ ಗುತ್ತಿ (see all)