ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು.
ಸುಡು ಬಿಸಿಲಲ್ಲಿ ಹರಿಯುವ
ಹಸಿರು ನದಿ.
ಸೇತುವೆ.
ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು.
ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು.
ಅಪ್ಪಿ ಹಿಡಿದಿದ್ದ ದಿನಗಳು
ಕಳೆದುಹೋದ ದಿನಗಳು
ನನ್ನ ತೋಳಿನ ರಕ್ಷಣೆಯ
ಬಂದರನ್ನು ಮೀರಿ ಬೆಳೆದ ನನ್ನಮಗಳಂಥ ದಿನಗಳು.
*****
ಮೂಲ: ಹ್ಯಾನ್ಸ್ ಮ್ಯಾಗ್ನೆಸ್ ಎನ್ಫ಼್‍ಜೆನ್ಸ್‍ಬರ್‍ಗರ್