ನನ್ನ ಶಬ್ದಗಳು
ಗೋಧಿಯಾಗಿದ್ದಾಗ
ನಾನು ನೆಲವಾಗಿದ್ದೆ.
ಕೋಪವಾಗಿದ್ದಾಗ
ನಾನು ಬಿರುಗಾಳಿಯಾಗಿದ್ದೆ.
ಕಲ್ಲಾಗದಿದ್ದಾಗ
ನಾನು ನದಿಯಾಗಿದ್ದೆ.
ನನ್ನ ಶಬ್ದಗಳು ಜೇನಾದಾಗ
ತುಟಿಗೆಲ್ಲ ನೊಣ ಮುತ್ತಿದವು.
*****
ಮೂಲ: ಮಹಮೂದ್ ದರ್‍ವೇಶ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)