ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ...

ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****...

ಅವ್ವ ಹತ್ತು ತಿಂಗಳು ಹೊತ್ತು ಹೆತ್ತಾಕೆ | ಅವ್ವ ಅನೇಕ ಕಷ್ಟಗಳ ನುಂಗಿ ನಡೆದಾಕೆ | ಅವ್ವ ಅಪ್ಪನ ಎಲ್ಲವನೂ ಸಹಿಸಿಕೊಂಡಾಕೆ|| ಅವ್ವ ಈ ಸಮಾಜಕ್ಕೆ ಅಂಜಿ ನಡೆದಾಕೆ| ಅವ್ವ ಈ ನೆರೆಹೊರೆಯವರ ನೆಚ್ಚಿನಾಕೆ| ಅವ್ವ ಹರಿದ ಸೀರೆಯ ಗಂಟಿಕ್ಕಿ ಉಟ್ಟು ಕೂಲಿಮ...

ಏನಿದೆನ್ನಯ ಕಾವ್ಯ ? ವ್ಯಾಕುಲತೆಯೊತ್ತಡವೋ ? ಆನಂದದುಮ್ಮಳವೋ ? ಆಳ್ತನದ ವೈಭವವೋ ? ಎನ್ನುಸಿರ ಬಿಸಿಗೆಷ್ಟು ಹಸುರಡಗುವುದೋ ? ಮನದೊಳೆಷ್ಟೊಂದು ಪರಿ ಪ್ರಶ್ನೆಯುದಿಸಿದರು ಎನ್ನ ಬದುಕಿನನಿವಾರ್‍ಯವೀ ನಿಟ್ಟುಸಿರು – ವಿಜ್ಞಾನೇಶ್ವರಾ *****...

ಕೊಡಬೇಡವೋ ಶಿವನೆ! ಕೂಸು ಮುದ್ದ ಲೋಕವೆಲ್ಲಾ ಬಂಜೆ ಅಂದ್ರೂ ಪರವಾಗಿಲ್ಲ ತೀರಿ ಹೋಗಲಿ ನಮ್ಮ ತಲೆಗೆ ಎಲ್ಲಾ! ಅವರು ಇವರು ಯಾರ ಮಾತು ಏಕೆ ? ಅಪ್ಪ ಯಾರೋ ಗೊತ್ತಿಲ್ಲ ಸಾಯೋತನಕ ಅಮ್ಮನನ್ನಾದರು ನೋಡಿಕೊಂಡಿರುವ ಭಾಗ್ಯವೂ ನಮಗಿಲ್ಲ; ಕಾರಣ ನಾವು ದನಗಳು....

ಶಿಕ್ಷೆ ಏನೆಂಬುದು ಹೂವಿಗೆ ತಿಳಿಯದು ತಾನೆ ರಕ್ಷಿಸಿಕೊಳ್ಳಲು ಹೂವು ಅರಿಯದು ಕತ್ತಿಯ ಅಲಗಿನಿಂದ ತಿವಿದರೂ ಹೂವು ತುಂಬು ನಗೆಯನ್ನೆ ಸುರಿಸುವುದು ಅಂತೆಯೆ ದೇವರೇ ಹೂವಿನ ಪಾಲನೆಗೆ ಪಣತೊಟ್ಟಿದ್ದಾನೆ ಚಿಟ್ಟೆಯಾಗಿ ಮರಿದುಂಬಿಯಾಗಿ ಸದಾ ಹೂದೋಟಗಳಲ್ಲಿ ...

ಕಡಲ ತಡಿಯಲ್ಲಿ ನಿಂತು ವಿರುದ್ಧ ಮುಖವಾಗಿ ಚಿತ್ತೈಸಿದರೆ ಎಂಥ ಸಹಜತೆ ಲ್ಯಾಂಡಸ್ಕೇಪ್ ಮಾಡಿದ ಮಹಾನ್ ತೋಟಗಾರನೊಬ್ಬ ಅಂಚಂಚನ್ನು ಬಿಡದೆ ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ. ನೋಡುತ್ತ ಮೈಮೇಲೆ ಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದ ಏರುವ ಇಳ...

ಬಟ್ಟೆ ಬದಲಾಯಿಸುತ್ತಾ ಪ್ರಾಚೀನ ವೃಕ್ಷಗಳು ಎತ್ತಿಹಿಡಿದ ಉಡುಪನ್ನು ನಿಧಾನವಾಗಿ ಧರಿಸುವುದು ಸಂಜೆ. ನೋಡು: ನೀನು ನಿಂತಲ್ಲಿಂದ ಬಯಲು ಇಬ್ಬಾಗವಾಗಿದೆ, ಕಣ್ಮರೆಯಾಗುವವರೆಗೂ ಒಂದು ಕೆಳಗೆ ಸಾಗಿದೆ, ಇನ್ನೊಂದು ಮುಗಿಲಿಗೇರಿದೆ. ನೀನು ಎಲ್ಲಿಗೂ ಪೂರ್ತ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...