ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ.
ಯಾರೂ ಹೊಡೆಯಲು ಬರುವುದಿಲ್ಲ.
ಶಪಿಸುವುದಿಲ್ಲ, ಬಯಸುವುದಿಲ್ಲ,
ನನ್ನ ತೋಳಿಗೆ ಒರಗಿ ಅಳುವುದಿಲ್ಲ.
ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ.
ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ.
ರೇಲ್ವೆ ಗಾರ್ಡಿನ ವಿಧಿ, ಫ್ಲಾಟ್ ಫಾರಮ್ಮು.
ಯಾರೂ ಹಂಚಿಕೊಳ್ಳುವುದಿಲ್ಲ.
ಮರೆತ ಜಲ್ಲಿ ಕಲ್ಲು, ಜೋಲು ಬಿದ್ದ ದಾರದ ತುಣುಕು.
ಗ್ರಹಬಂಧನಕ್ಕೆ ಯಾರೂ ಜವಾಬ್ದಾರರಲ್ಲ;
ಹೊರಗೆ ಬೆಳಕು, ತೆರೆದ ಕಿಟಕಿ, ನನ್ನ ಬಾಗಿಲು, ಅದರ ದೃಢತೆ, ಮೌನ,
ಇದು ನನ್ನ ವಿಧಿ.
ನನ್ನ ಕಾಪಾಡುವವರು ಯಾರೂ ಇಲ್ಲದ ಈ ಮೌನ, ಭಯ.
ಮುಂದಿನ ಸ್ಟೇಷನ್ನು,
ಅದೂ ಸುಳ್ಳು, ಅಷ್ಟೆ.
*****
ಮೂಲ: ಮಾರಿಯಾ ಎಲೆನಾ ಕ್ರುಝ್ ವಾರೆಲ