ನಿನ್ನ ಹಂದರದ ಪರದೆಯನ್ನೊಮ್ಮೆ ಕಳಚಿಟ್ಟುಬಿಡು. ಲೋಕದ ಮೋಹ ಮಕಾರಗಳು ಚಿಗುರುತಿವೆ. ದೆಸೆದಿಕ್ಕುಗಳು ಚೈತ್ರ ಚಿಗುರ ಮೀಯುತ್ತಿವೆ ಮನದ ಬನಿ ಕೆನೆಗಟ್ಟಿದೆ. ಓ..ಸಾವೇ ಕನಿಕರಿಸು ಕಾಡಿಗೆಯ ಕಣ್ಣು ಕಪೋಲದ ಕೆಂಪು ಕೆಂದಾವರೆ ತುಟಿಗಳು ಅರಳಿ ನಗುತ್ತಿವ...

ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ? ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು? ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು ನಿನ್ನ ಸದೃಢ ಕೊರಳು ಬೇಕೇ ಬೇಕು. ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ ಬಳಲಿ, ಬಿಳುಪೇರಿ, ಸೂರ್ಯ ಹ...

ನಿನ್ನ ದನಿಯಲಿ ಉಸಿರು ಹಸಿರಾಗಿ ನಿನ್ನ ಸಿರಿವಂತಿಕೆಯಲಿ ನೊಂದು ಬೆಂದವರ ಹಾಡಾಗಿ ಗೆಳೆಯಾ ನನ್ನಲ್ಲಿ ನೀನು ನಿನ್ನಲ್ಲಿ ನಾನಾಗಿ || ನಿನ್ನ ದನಿಯಲಿ ಇಂಪು ತಂಪಾಗಿ ಶೃತಿಲಯದಿ ಕೂಡಿದ ಧನ್ಯತೆ ತುಂಬಿದ ಹಾಡಾಗಿ ಗೆಳತೀ ನನ್ನಲ್ಲಿ ನೀನು ನಿನ್ನಲ್ಲಿ ನ...

ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ? ಯಾಕೆ ಕಂಬನಿ ಕಣ್ಣಿನಲಿ? ನೆಚ್ಚಿದ ಜೀವಗಳೆಲ್ಲವು ಕಡೆಗೆ ಮುಚ್ಚಿ ಹೋದುವೇ ಮಣ್ಣಿನಲಿ? ಇದ್ದರು ಹಿಂದೆ ಬೆಟ್ಟದ ಮೇಲೇ ಸದಾ ನೆಲೆಸಿದ್ದ ಗಟ್ಟಿಗರು, ಹೊನ್ನು ಮಣ್ಣು ಏನು ಕರೆದರೂ ಬೆಟ್ಟವನಿಳಿಯದ ಜಟ್ಟಿಗಳು. ಹಳೆಯ...

ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ ಕಬ್ಬು ನೋಡಿದರೆ ಸಾಕು ನನ್ನ ಮನಸಿನೊಳಗೆ ಮಬ್ಬು ಎಂಥ ರಸಿಕ ಎಂಥ ರಸಿಕ ...

ಹನುಮಂತಣ್ಣಾ ಶನಿವಾರಣ್ಣಾ ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ| ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್ ಯಾಕೆ ಹಾಯ್ ಹಾಯ್ ಅಂತಾರೆ ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್ ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧|| ದೇವ್ರೇ ಇಲ್ಲಾ ಅಂದಾ ಜಾನಿ ಜಾಯ್ಲ...

ಎಲ್ಲ ಮರೆತು ಹೋಗಲಿ ನಿನ್ನ ಪ್ರೀತಿ ಪ್ರೇಮಾ ಪ್ರಣಯ| ಮೋಸದಿಂದ ಹೊರ ಬಂದು ತಿಳಿಯಾಗುತಿದೆ ನನ್ನಯಾ ಹೃದಯ| ಶುದ್ಧಂತರಂಗದಿ ಪ್ರೀತಿಸಿ ನಿನ್ನ ಭಗ್ನವಾಗಿದೆನ್ನ ಹೃದಯ|| ಸ್ನೇಹದಿಂದ ಪ್ರೀತಿ ಬೆರೆತು ಅಂತರಿಕ್ಷಕೆ ಹಾರಿತು ಮನ| ಗಾಳಿಪಟದಂತೆ ಮೇಲಕ್ಕೇ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...