ಎಂಥ ಹೆಣ್ಣು ಎಂಥ ಹೆಣ್ಣು
ಕೆನೆ ಹಾಲಿನ ಗಿಣ್ಣು
ಕವಿಗಳು ಹೇಳಿದ ದುಂಬಿಯಂತೆ
ದೊಡ್ಡ ದೊಡ್ಡ ಕಣ್ಣು

ಎಂಥ ರಸಿಕ ಎಂಥ ರಸಿಕ
ಎಲಾ ಎಲಾ ನಾಯಕ!

ತಿದ್ದಿ ತೀಡಿದ ಹುಬ್ಬು
ಯಾರ ತೋಟದ ಕಬ್ಬು
ನೋಡಿದರೆ ಸಾಕು ನನ್ನ
ಮನಸಿನೊಳಗೆ ಮಬ್ಬು

ಎಂಥ ರಸಿಕ ಎಂಥ ರಸಿಕ
ಎಲಾ ಎಲಾ ನಾಯಕ!

ಇವಳ ನಡೆಯ ಬಳುಕು
ಎದೆಗೆ ಹೊಸ ಚಾಕು
ತಾಕಿದಂತೆ ಅನಿಸುವುದು
ವಿದ್ಯುತ್ತಿನ ಶಾಕು

ಎಂಥ ರಸಿಕ ಎಂಥ ರಸಿಕ
ಎಲಾ ಎಲಾ ನಾಯಕ !

ಸೂರ್ಯ ಚಂದ್ರ ಇರೋತನಕ
ಆಗಿ ಇವಳ ಆರಾಧಕ
ಪ್ರೇಮಕೆಂದು ಕಟ್ಪುವೆನು
ಒಂದು ಮಹಾ ಸ್ಮಾರಕ

ಎಂಥ ರಸಿಕ ಎಂಥ ರಸಿಕ
ಎಲಾ ಎಲಾ ಘಾತುಕ!
*****