ನಿನ್ನಲ್ಲಿ ನಾನು-ನನ್ನಲ್ಲಿ ನೀನು

ನಿನ್ನ ದನಿಯಲಿ
ಉಸಿರು ಹಸಿರಾಗಿ
ನಿನ್ನ ಸಿರಿವಂತಿಕೆಯಲಿ
ನೊಂದು ಬೆಂದವರ ಹಾಡಾಗಿ
ಗೆಳೆಯಾ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ನಿನ್ನ ದನಿಯಲಿ
ಇಂಪು ತಂಪಾಗಿ
ಶೃತಿಲಯದಿ ಕೂಡಿದ
ಧನ್ಯತೆ ತುಂಬಿದ ಹಾಡಾಗಿ
ಗೆಳತೀ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ನಿನ್ನ ದನಿಯಲಿ
ನನ್ನ ನುಡಿ ಸೆರೆಯಾಗಿ
ಜೀವ ತುಡಿತದಲಿ ಒಂದಾಗಿ
ಬೆರೆತ ನೂರಾಸೆಗಳ ಹಾಡಾಗಿ
ಗೆಳೆಯಾ ನಿನ್ನಲ್ಲಿ ನಾನು
ನನ್ನಲ್ಲಿ ನೀನಾಗಿ ||

ನಿನ್ನ ದನಿಯಲಿ
ಪ್ರೀತಿಯು ಅಲೆಯಾಗಿ
ಪ್ರೇಮದಿ ಸೆರೆಯಾದ
ದುಂಬಿಯು ಹಾಡಾಗಿ
ಗೆಳತೀ ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗಿ ||

ಗೆಳತಿ ನಾವೇನಾವಾಗಿ
ಜೀವದೊಡಲ
ಬೆರೆತ ಹಾಡಾಗಿ
ಹಾಡಿನ ಇಂಪಿಗೆ ತಣಿವೆರೆದು
ತಂಪಾಗಿ ನಾವೇ ನಾವಾಗಿ
ನಮಗೆ ನಾವೇ ನಾವಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹಾಗೆ ನಿಂತೆಯೊ ದಿಗ್ಭ್ರಾಂತ?
Next post ಮುತ್ತು ಚೆಲ್ಲಾಪಿಲ್ಲಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…